ನ್ಯಾಮತಿ: ತಾಲೂಕು ಅರೇಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಹಿರೇಹಳ್ಳಕ್ಕೆ ಒಂದು ಕೋಟಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣದ ಯೋಜನೆಗೆ ಶಾಸಕ ಡಿ ಜಿ ಶಾಂತನಗೌಡ್ರು ಗುದ್ದಲಿ ಪೂಜೆ ನೆರವೇರಿಸಿದರು.
ಚೆಕ್ ಡ್ಯಾಮ್ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು ಈ ಚೆಕ್ ಡ್ಯಾಮ ನಿರ್ಮಾಣದಿಂದ ಸುಮಾರು 300 ರಿಂದ 400 ಎಕ್ಕರ ಜಮೀನಿಗಳಿಗೆ ಅಂತರ್ಜಲ ಹೆಚ್ಚಾಗಿ ಈ ಭಾಗದ ರೈತರಗಳಿಗೆ ಅನುಕೂಲವಾಗಲಿದೆ ಇದರ ಜೊತೆಗೆ ಸುಮಾರು ವರ್ಷಗಳಿಂದ ರೈತರೆ ಬೇಡಿಕೆ ಇದಾಗಿತ್ತು ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಚೆಕ್ ಡ್ಯಾಮ್ ನಿರ್ಮಾಣದಿಂದ ಕಂಕನಹಳ್ಳಿ ಅರೇಹಳ್ಳಿ ಗಂಗನಕೋಟೆ ಗ್ರಾಮಗಳ ರೈತರಿಗೆ ಹಾಗೂ ದನಕರಗಳಿಗೆ ಕುಡಿಲಿಕ್ಕೆ ನೀರು ಸಹಾಯವಾಗಲಿದೆ ಎಂದು ಎಂದರು.
ಈ ಸಂದರ್ಭದಲ್ಲಿ AEE ಆನಂದಪ್ಪ, AE ಮಲ್ಲಿಕಾರ್ಜುನ್, ಗುತ್ತಿಗೆದಾರ ಮಂಜುನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೀರಭದ್ರ ಪಟೇಲ್, ರವಿ ಗೌಡ್ರು ಕಂಕನಹಳ್ಳಿ ಅಶೋಕ್, ಹಳದಪ್ಪ. ರಾಜು ಸೇರಿದಂತೆ ಸುತ್ತಮುತ್ತಲಿ ಗ್ರಾಮಸ್ಥರು ಸಹ ಹಾಜರಿದ್ದರು.