ಹೊನ್ನಾಳಿ ಪಟ್ಟಣದಲ್ಲಿ ಇಂದು ಹೊನ್ನಾಳಿ ಮತ್ತು ನ್ಯಾಮತಿ ಸರ್ಕಾರಿ ಪಡಿತರ ವಿತರಕರ ಸಂಘದಿಂದ ರಾಜ್ಯ ಸರ್ಕಾರದ ಆಹಾರ ಸಚಿವರಾದ ಕೆ ಎಚ್ ಮುನಿಯಪ್ಪನವರಿಗೆ ಕಮಿಷನನ್ನ ಹೆಚ್ಚಳ ಮಾಡುವಂತೆ ಹಿಂದೆ ಒತ್ತಾಯಿಸಿದರು. ಮನವಿ ಪುರಸ್ಕರಿಸಿದ ಆಹಾರ ಸಚಿವ ಕೆಎಚ್ ಮುನಿಯಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗಮನಕ್ಕೆ ತಂದು 26 ರೂಗಳ ಕಮಿಷನ್ ಹೆಚ್ಚಿಗೆ ಮಾಡಿಸಿರುವ ಹಿನ್ನೆಲೆಯಲ್ಲಿ ಅವಳಿ ತಾಲೂಕಿನ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಹಾಗೂ ಆಹಾರ ಸಚಿವರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಶಾಸಕ ಡಿ ಜಿ ಶಾಂತನಗೌಡ್ರುರವರಿಗೆ ಸಹ ಸನ್ಮಾನಿಸಿ ಅಭಿನಂದಿಸಿದರು.
ಪಡಿತರ ವಿತರಕರ ಸಂಘದ ಬೇಡಿಕೆಗಳಾದ ಹಿಂದಿನ ಸರ್ಕಾರ ಅಂಗಡಿಯ ಮಾಲೀಕರು ಮರಣ ಹೊಂದಿದರೆ ಅಥವಾ 65 ವರ್ಷ ತುಂಬಿದ ಮಾಲೀಕನಿಗೆ ಅನುಕಂಪದ ಆಧಾರದ ಮೇಲೆ ಮುಂದುವರಿಕೆಗೆ ತಡೆ ನೀಡಿತ್ತು. ಅಂಗಡಿಯ ಮಾಲೀಕರು ಕೋರ್ಟಿನ ಆದೇಶದ ಮೇಲೆ ಪರವಾನಿಗೆ ರಿನಿವಲ್ ಮಾಡಿಸಿಕೊಳ್ಳುತ್ತಿದ್ದೇವೆ. ಬಹಳ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ 65 ವರ್ಷದ ತುಂಬಿದ ಮಾಲೀಕನು ಮರಣ ಹೊಂದಿದ ಪಕ್ಷದಲ್ಲಿ ಅನುಕಂಪದ ಆಧಾರದ ಮೇಲೆ ಅವರ ಪತ್ನಿಗೆ ಅಥವಾ ಮಗನಿಗೆ ಅವಕಾಶ ಮಾಡಿಕೊಡಬೇಕೆಂದು ಶಾಸಕ ಡಿ ಜಿ ಶಾಂತನಗೌಡ್ರುರವರಿಗೆ ಮನವಿ ಪತ್ರ ಸಲ್ಲಿಸಿ, ನೀವುಗಳು ರಾಜ್ಯ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಯನ್ನು ಇತ್ಯರ್ಥ ಗೊಳಿಸಬೇಕು ಎಂದು ತಿಳಿಸಿದಾಗ ಚುನಾವಣೆ ನಂತರ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಿಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ನಂತರ ಶಾಸಕರಿಗೆ ಅವಳಿ ತಾಲೂಕಿನ ಪಡಿತರ ವಿತರಕರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಹೊನ್ನಾಳಿ ಮತ್ತು ನ್ಯಾಮತಿ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷರುಗಳಾದ ಮಂಜಪ್ಪ ಅರಭಗಟ್ಟೆ, ಕುಬೇರಪ್ಪ ಕೆಂಚುಕೊಪ್ಪ, ಕಾರ್ಯದರ್ಶಿಗಳಾದ ಜನಾರ್ದನ್ ಮೂರ್ತಿ, ಚೇತನ್ ಬೆಳಗುತ್ತಿ ಅವಳಿ ತಾಲೂಕಿನ ಪಡಿತರ ವಿತರಕ ಅಂಗಡಿಯ ಮಾಲೀಕರುಗಳು ಸಹ ಉಪಸ್ಥಿತಿಯಲ್ಲಿದ್ದರು.