ದಾವಣಗೆರೆ :ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಲೋಕಸಭಾಚುನಾವಣಾ ಪ್ರಚಾರ ಸಭೆಯ ವೇಳೆ ಪ್ರಧಾನಿ ನರೇಂದ್ರಮೋದಿ ಅವರ ಪಕ್ಕದಲ್ಲಿ ತೆರೆದವಾಹನದಲ್ಲಿ ಹೋಗಿದ್ದು ನನ್ನ ಪುಣ್ಯ. ಈಮೂಲಕ ಅವರು ನನ್ನ ಗೆಲುವಿಗೆ ಆಶೀರ್ವಾದ ಮಾಡಿದ್ದಾರೆ ಎಂದು ದಾವಣಗೆರೆ ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿಸಿದ್ದೇಶ್ವರ್ ತಿಳಿಸಿದರು.
ಸಭೆಯ ಬಳಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತೆರೆದ ವಾಹನದಲ್ಲಿ ಪ್ರಧಾನಿ ನರೇಂದ್ರಮೋದಿ ಅವರಪಕ್ಕದಲ್ಲಿ ನಿಂತು ಲಕ್ಷಾಂತರ ಜನರ ನಡುವೆ ರ್ಯಾಲಿಯಲ್ಲಿ ಹೋಗಲು ನನಗೆ ಅವಕಾಶ ಸಿಕ್ಕಿದ್ದು, ನನ್ನಗೆಲುವಿನ ದಿಕ್ಸೂಚಿ ಎಂದರು.
ಪ್ರಧಾನಿನರೇಂದ್ರಮೋದಿ ಅವರು ಕೇವಲಬಾಯಿ ಮಾತಿನಲ್ಲಿ ಮಹಿಳಾಸಬಲೀಕರಣದ ಬಗ್ಗೆ ಮಾತನಾಡುವುದಿಲ್ಲ. ಅದನ್ನುಮಾಡಿತೋರಿಸುತ್ತಾರೆ. ಮಹಿಳಾ ಕೋಟದಲ್ಲಿ ನನಗೆ ಟಿಕೆಟ್ ಕೊಟ್ಟಿದ್ದಲ್ಲೇ ಅವರ ಪಕ್ಕದಲ್ಲಿ ರ್ಯಾಲಿಯಲ್ಲಿ ಭಾಗವಹಿಸಲು ನನಗೆ ಅವಕಾಶ ಕಲ್ಪಿಸುವ ಮೂಲಕ ಲಕ್ಷಾಂತರ ಮಹಿಳೆಯರಿಗೆ ಗೌರವ ಸೂಚಿಸಿದ್ದಾರೆ. ನರೇಂದ್ರಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಅಹೋರಾತ್ರಿ ಶ್ರಮಿಸುತ್ತೇವೆ ಎಂದು ತಿಳಿಸಿದರು.
ದಾವಣಗೆರೆ ಲೋಕಸಭಾಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಅಲೆಜೋರಾಗಿದೆ. ಕಳೆದ 28ವರ್ಷಗಳಿಂದ ದಾವಣಗೆರೆಕ್ಷೇತ್ರ ಬಿಜೆಪಿ ಭದ್ರಕೋಟೆ. ಈ ಬಾರಿಯೂ ನಾನು ಇಲ್ಲಿಂದ ಕಮಲದ ಹೂವು ಮುಡಿದು ಕೊಂಡು ದೆಹಲಿಗೆ ಹೋಗಲು ಜನ ಆಶೀರ್ವಾದ ಮಾಡುತ್ತಿದ್ದಾರೆ. ಇಡೀ ದೇಶ ಸುಭದ್ರ, ಸುಭೀಕ್ಷವಾಗಿ ಇರಬೇಕು ಅಂದರೆ ನರೇಂದ್ರಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಎಲ್ಲವರ್ಗದವರು ಆಶಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ಸಂಸದಜಿ.ಎಂ.ಸಿದ್ದೇಶ್ವರ್, ಶಾಸಕಬಿ.ಪಿ.ಹರೀಶ್, ಬಿಜೆಪಿಮುಖಂಡರಾದ ಜಿ.ಎಸ್.ಅನಿತ್ಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷಹನಗವಾಡಿ ವೀರೇಶ್, ಪ್ರಧಾನಕಾರ್ಯದರ್ಶಿಐರಣಿ ಅಣ್ಣೇಶ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *