ನ್ಯಾಮತಿ:ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಮಾರ್ಚ್20ರಿಂದ ಮಾರ್ಚ್26ರವರೆಗೆ ನಡೆಯಲಿರುª Àಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗ ಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಸಮಾರಂಭಕ್ಕೆ ಬುಧವಾರ ಭಕ್ತರು ದವಸ,ದಾನ್ಯ,ತರಕಾರಿ, ದಿನಸಿ ಪದಾರ್ಥಗಳನ್ನು ಲಾರಿಗಳಲ್ಲಿ ತೆಗೆದುಕೊಂಡು ಹೋಗಿ ಅರ್ಪಿಸಿದರು.
ಪ್ರತಿವರ್ಷದಂತೆ ರೇಣುಕಜಯಂತಿ ಕಾರ್ಯಕ್ರಮಕ್ಕೆ ನ್ಯಾಮತಿ ತರಕಾರಿ ಮಂಡಿ ಮಾಲೀಕರು,ರೈತರು ಹಾಗೂ ಭಕ್ತರಿಂದ ಸಂಗ್ರಹಿಸಿದ 105ಚೀಲ ಅಕ್ಕಿ, 30 ಚೀಲ ಬೆಲ್ಲ, 5 ಟಿನ್ಎಣ್ಣೆ, 75 ಬಾಕ್ಸ್ಟಮೊಟ, 1 ಲೋಡ್ತರಕಾರಿ, 20 ಚೀಲ ಈರುಳ್ಳಿ, 500 ತೆಂಗಿನಕಾಯಿ, ಬೆಳ್ಳುಳ್ಳಿ ಅಲೊಗೆಡ್ಡೆ, 18 ಬಾಕ್ಸ್ಉಪ್ಪಿನಕಾಯಿ ಹಾಗೂ ಇತರೆಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ ಪೀಠಕ್ಕೆಅರ್ಪಿಸಲಾಯಿತುಎಂದು ಹೊಸಕಟ್ಟೆ ಬಸವರಾಜಪ್ಪ ಮಾಹಿತಿ ನೀಡಿದರು.
ಡಿ.ಆರ್.ರುದ್ರಣ್ಣ, ಕುಂಬಾರ ಗುರು, ಎಸ್.ಎಂ.ಟಿ.ಶಿವು, ಹಲಗೇರಿ ಬಾಬು, ಪೂಜಾರ ನಾಗರಾಜ, ಹಾಲೇಶ, ಪೂಜಾರ ರುದ್ರೇಶ,ಕುಂಬಾರ ಶಿವರಾಜ, ರೇವಣಪ್ಪ, ಉಕ್ಕಡಗಾತ್ರಿ ಮಹೇಶ ಮತ್ತು ಸಂಗಡಿಗರು ಲಾರಿಗಳ ಮೂಲಕ ಪೀಠಕ್ಕೆ ತೆರಳಿದ್ದಾರೆ.
“ನ್ಯಾಮತಿ ಭಕ್ತರು ಪೀಠದ ಅಭಿಮಾನಿಗಳಾಗಿದ್ದು, ಅವರ ಭಕ್ತಿಯನ್ನು ಸ್ವೀಕರಿಸಿ ಶುಭ ಆಶೀರ್ವಾದ ಮಾಡಲಾಗಿದೆ”ಎಂದು ಜಗದ್ಗುರು ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.