ನ್ಯಾಮತಿ: ತಾಲೂಕು ಮಾದನಬಾವಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಸಮಯಕ್ಕೆ ವಿರೇಶಪ್ಪ ಬಿನ್ ಸಿದ್ದಪ್ಪ ಅಣಜಿ, ಇವರ ತಗಡಿನ ಮನೆಯು ಬೆಂಕಿ ಗಾವತಿ ಆಗಿದೆ. ಮನೆಯ ಮಾಲಿಕ ವಿರೇಶಪ್ಪ ಸುದ್ದಿ ಮಾಡಲು ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಉದಯವಾಣಿ ಪತ್ರಿಕ ವರದಿಗಾರರ ಜೊತೆ ಮಾತನಾಡಿದ ಅವರು ಮಂಗಳವಾರ ಎರಡು ಗಂಟೆಯ ಸಮಯದಲ್ಲಿ ಆಕಸ್ಮಿಕವಾಗಿ ನಮ್ಮ ಮನೆಗೆ ಬೆಂಕಿ ಬಿದ್ದು ಒಂದು ಕ್ವಿಂಟಾಲ್ ಮೆಕ್ಕೆಜೋಳ, ಮೂರು ಕ್ವಿಂಟಲ್ ಬಿಳಿಜೋಳ, ನಾಲ್ಕು ಕ್ವಿಂಟಲ್ ಉರುಳಿ, ಒಂದು ಕ್ವಿಂಟಲ್ ಅವರೇ ಕಾಳು, ವರ್ಷಕ್ಕೆ ಆಗುವಷ್ಟು ತೊಗರಿ, ಮನೆಯಲ್ಲಿ ಶೇಖರಣೆ ಮಾಡಿದ ದವಸ ಧಾನ್ಯಗಳು ಸುಟ್ಟು ಕರಕಲಾಗಿ, ಮೂರು ಕುರಿಗಳು ಬೆಂಕಿಯಲ್ಲಿ ಬೆಂದು ಸಾವನ್ನಪ್ಪಿವೆ. ಮಗಳ ಮದುವೆ ಮಾಡಲಿಕ್ಕೆ ಸಾಲದ ರೂಪದಲ್ಲಿ ತಂದಿದ್ದ 22 ಸಾವಿರ ಪ್ಲಾಸ್ಟಿಕ್ ಡಬ್ಬದಲ್ಲಿಟ್ಟಿದ್ದ ಹಣವು ಸಹ ಬಸ್ಮವಾಗಿದೆ. ಬೆಂಕಿ ಬಿದ್ದ ಸಂದರ್ಭದಲ್ಲಿ ಮನೆಯಲ್ಲಿ ಕಟ್ಟಿದ ಎರಡು ಹೋರಿಗಳು ಕೈಗೆ ಸಿಗದೆ ದಿಕ್ಕಾ ಪಾಲಾಗಿವೆ ಸುಮಾರು ಮೂರರಿಂದ ನಾಲ್ಕು ಲಕ್ಷದ ನಷ್ಟವಾಗಿ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ರೈತ ಅಳಲನ್ನು ತೋಡಿಕೊಂಡರು. ಆದಷ್ಟು ಬೇಗ ತಾಲೂಕು ಮಟ್ಟದ ಕಂದಾಯ ಇಲಾಖೆ ಅಧಿಕಾರಿಗಳು ಬೇಗನೆ ಪರಿಹಾರವನ್ನು ಕೊಡಬೇಕೆಂದು ಆಗ್ರಹಿಸಿದರು.