ನ್ಯಾಮತಿ ಮಳೆಗಾಲ ಪ್ರಾರಂಭವಾಗುವ ಮುಂಚೆನೇ ಹೊಸ ಜಾಕ್ ವೆಲ್ ಕಾಮಗಾರಿ ತಕ್ಷಣವೇ ಪೂರ್ಣಗೊಳಿಸಿ ಎಂದ ಶಾಸಕ ಡಿ ಜಿ ಶಾಂತನಗೌಡ್ರು ಹೇಳಿದರು.
ಗೋವಿನಕೋವಿ ತುಂಗಭದ್ರಾ ನದಿಗೆ ನ್ಯಾಮತಿ ಪಟ್ಟಣಕ್ಕೆ ಹೊಳೆಯಿಂದ ಕುಡಿಯಲಿಕ್ಕೆ ನೀರು ಪೂರೈಸಲು ನಿರ್ಮಾಣವಾಗುತ್ತಿರುವ ಜಾಕ್ ವೆಲ್ ಕಾಮಗಾರಿಯನ್ನು ವೀಕ್ಷಿಸಿ ನಂತರ ಮಾತನಾಡಿದ ಅವರು ಮುಂಗಾರಿನ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ತುಂಗಭದ್ರ ನದಿಗೆ ನೀರಿನ ಒಳಹರಿವು ಕಡಿಮೆಯಾಗಿದ್ದು ಪ್ರಸಕ್ತ ಸಾಲಿನ ಮುಂಗಾರಿನ ಮಳೆ ಪ್ರಾರಂಭವಾಗುವುದಕ್ಕಿಂತ ಮುಂಚೆ ಜಾಕವೆಲ್ ಕಾಮಗಾರಿಯನ್ನ ಬೇಗನ ಪೂರ್ಣಗೊಳಿಸಿ ಸಾರ್ವಜನಿಕರಿಗೆ ನೀರನ್ನು ಒದಗಿಸಿ ಎಂದು ಗುತ್ತಿಗೆದಾರನಿಗೆ ತಾಕೀತು ಮಾಡಿದರು. ನಂತರ ಅರೇಹಳ್ಳಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ನೀರಿನ ಸುದ್ದಿಕರಣ ಘಟಕದ ಕೇಂದ್ರಕ್ಕೆ ಭೇಟಿ ನೀಡಿ ಸಣ್ಣಪುಟ್ಟ ಲೋಪ ದೋಷಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ನೀರು ಕುಡಿಯಲಿಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ವಾಟರಮೆನಗೆ ಹೇಳಿದರು. ಗುಂದೂರ್ ಲೋಕೇಶ್, ಷಣ್ಮುಖಪ್ಪ, ಎಂ ಕರಿಬಸಪ್ಪ, ಜೆ ಮಧು, ರುದ್ರೇಶ್ ಸಹ ಇದ್ದರು.

Leave a Reply

Your email address will not be published. Required fields are marked *