ನ್ಯಾಮತಿ:ತಾಲ್ಲೂಕಿನ 4 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 2024ರ ಮಾರ್ಚ್-ಏಪ್ರಿಲ್‍ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರದಿಂದಆರಂಭವಾಗಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಯಿತುಎಂದು ಹೊನ್ನಾಳಿ ತಾಲ್ಲೂಕುಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ನಂಜರಾಜ ತಿಳಿಸಿದರು.
ತಾಲ್ಲೂಕಿನ ಜೀನಹಳ್ಳಿ239 ವಿದ್ಯಾರ್ಥಿಗಳು, ಚೀಲೂರು252, ನ್ಯಾಮತಿ306 ಮತ್ತು ಸವಳಂಗ232,ಒಟ್ಟು 1029 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿಯಾಗಿದ್ದು, ಅವರಲ್ಲಿಇಬ್ಬರು ವಿದ್ಯಾರ್ಥಿನಿಯರುಗೈರು ಹಾಜರಾಗಿದ್ದು, ಉಳಿದಂತೆ 1027 ವಿದ್ಯಾರ್ಥಿಗಳು ಪ್ರಥಮ ಭಾಷೆ ಪರೀಕ್ಷೆ ಉತ್ತರಿಸಿದ್ದಾರೆ ಎಂದರು
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆ ಬರೆಯುವಂತೆಎಲ್ಲಾ ಸಿದ್ದತೆಗಳನ್ನು ಮಾಡಿದ್ದು,ಕೊಠಡಿ ಮೇಲ್ವಿಚಾರಕರ ನೇಮಕಾತಿ, ವಿದ್ಯಾರ್ಥಿಗಳಿಗೆಕುಡಿಯುವ ನೀರು ವ್ಯವಸ್ಥೆ, ಕೊಠಡಿಗಳಿಗೆ ಸಿಸಿಟಿ ಕ್ಯಾಮೆರ ಅಳವಡಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಮುದ್ದನಗೌಡರು ತಿಳಿಸಿದರು.