ನ್ಯಾಮತಿ:ಸವಳಂಗ ಗ್ರಾಮದ ಗ್ರಾಮ ದೇವತೆ ಮಿಕ್ಕಿದ ಮಾರಿಕಾಂಬಾದೇವಿಯರಥೋತ್ಸವ ಮಾರ್ಚ್ 29ರಂದು ಬೆಳಿಗ್ಗೆ 10 ಗಂಟೆಗೆ ನೆರವೇರಲಿದೆ.
ಆಂಜನೇಯಸ್ವಾಮಿದೇವಸ್ಥಾನದಿಂದಆಲಂಕೃತಗೊಂಡರಥೋತ್ಸವದಲ್ಲಿಅಮ್ಮನವರನ್ನು ಪ್ರತಿಷ್ಠಾಪಿಸಿ, ಸಕಲ ಮಂಗಳ ವಾದ್ಯಗಳೊಂದಿಗೆ ರಥೋತ್ಸವ ಮಾರಿಕಾಂಬಾದೇವಸ್ಥಾನದವರೆಗೆ ಚಲಿಸಲಿದೆ. ಪ್ರಸಾದ ವ್ಯವಸ್ಥೆಗೆ ಭಕ್ತಾದಿಗಳು ದೇಣಿಗೆ, ಅಕ್ಕಿ, ಬೆಲ್ಲ,ಎಣ್ಣೆ,ಕಾಯಿಇತರೆ ದವಸ-ಧಾನ್ಯಗಳನ್ನು ಅರ್ಪಿಸುವಂತೆದೇವಸ್ಥಾನ ಸಮಿತಿಯವರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 98868 91314, 9886158482 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.