ದಾವಣಗೆರೆ : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರು ದಾವಣಗೆರೆ ನಗರದ ವಿವಿಧ ಭಾಗಗಳಲ್ಲಿ ಮತಯಾಚನೆ ನಡೆಸಿದರು. ಕರೂರು ಕೈಗಾರಿಕಾ ವಲಯ, ವಿವಿಧ ಕಂಪನಿ, ಕಾರ್ಖಾನೆಗಳ ಸಿಬ್ಭಂದಿಗಳ ಬಳಿ ಮತಯಾಚನೆ ನಡೆಸಿದರು.
ಕೈಗಾರಿಕಾ ಪ್ರದೇಶದಲ್ಲಿ ಮತಯಾಚನೆ ಮಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗಾರಿಕಾ ವಲಯಕ್ಕೆ ಮತ್ತು ಕಾರ್ಮಿಕರಿಗೆ ನೀಡಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಮೇಕ್ ಇನ್ ಇಂಡಿಯಾ ಎಂಬ ಹೊಸ ಕಲ್ಪನೆ ಹುಟ್ಟುಹಾಕಿ ಕೋಟ್ಯಂತರ ಮಂದಿಗೆ ಸ್ವಂತ ಉದ್ಯೋಗಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನೆ ಯೋಜನೆ (ಪಿಎಂಇಜಿಪಿ) ಅಡಿ ದಾವಣಗೆರೆ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಿಮೆಂಟ್ ಬ್ರಿಕ್ಸ್, ಊದಬತ್ತಿ, ಬ್ಯೂಟಿಪಾರ್ಲರ್, ರೆಡಿಮೇಡ್ ಗಾರ್ಮೆಂಟ್ಸ್ ಸೇರಿದಂತೆ ವಿವಿಧ ಕೈಗಾರಿಕೆ, ಗುಡಿ ಕೈಗಾರಿಕಗೆ ಕೋಟ್ಯಂತ ರೂಪಾಯಿ ಸಹಾಯದ ಧನ ಮೂಲಕ ಉತ್ತೇಜನ ನೀಡಿದ್ದಾರೆ ಎಂದರು.
ಕೈಗಾರಿಕಾ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ, ಹೊರ ದೇಶದ ಸಾಕಷ್ಟು ಕಂಪನಿಗಳು ಭಾರತಕ್ಕೆ ಬರುತ್ತಿವೆ. ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗವಕಾಶಗಳು ಸೃಜನೆಯಾಗುತ್ತಿವೆ. ಇದೆಲ್ಲದಕ್ಕೂ ಕೇಂದ್ರ ಸರ್ಕಾರದ ಕೈಗಾರಿಕಾ ನೀತಿಯೇ ಕಾರಣ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ ಕೈಗಾರಿಕಾ ವಲಯ ಮತ್ತಷ್ಟು ಅಭಿವೃದ್ಧಿಯಾಗಲಿದೆ. ನೀವು ನನಗೆ ಮತ ಚಲಾಯಿಸಿ, ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದು ಮನವಿ ಮಾಡಿದರು
39ನೇ ವಾರ್ಡ್ ಪಾಲಿಕೆ ಬಿಜೆಪಿ ಸದಸ್ಯೆ ಗೀತಾ ದಿಳ್ಳಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಇದೇ ವೇಳೆ ವಾರ್ಡ್ ನಲ್ಲಿ ಸಾರ್ವಜನಿಕರ ಮತಯಾಚನೆ ಮಾಡಿದರು.
ಬಿಜೆಪಿ ಮುಖಂಡರಾದ ಎಸ್.ಟಿ.ವೀರೇಶ್, ಗ್ಯಾರೆಹಳ್ಳಿ ಶಿವಕುಮಾರ್, ಜಿ.ಎಸ್.ಅಶ್ವಿನಿ, ಪ್ರೇಮಮ್ಮ, ಗಾಯಿತ್ರಿ ಸುಭಾಷ್, ಜಯಮ್ಮ ಮತ್ತಿತರರು ಇದ್ದರು.