ನ್ಯಾಮತಿ: ಸವಳಂಗ ಗ್ರಾಮದ ಗ್ರಾಮದೇವತೆ ಮಿಕ್ಕಿದ ಮಾರಿಕಾಂಬಾದೇವಿ ಜಾತ್ರ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ಈ ಸಂಬಂಧ ದೇವಿಗೆ ಪಂಚಾಮೃ ತಅಭಿಷೇಕ ಪೂಜೆ ನೆರವೇರಿದ ನಂತರ ವಿಶೇಷವಾಗಿ ಬೆಳ್ಳಿ ಆಲಂಕಾರ ಮತ್ತು ಹೂವಿನ ಆಲಂಕಾರದ ಪೂಜೆ ನೆರವೇರಿಸಲಾಯಿತು.ಬೆಳಿಗ್ಗೆಯಿಂದಲೇ ಗ್ರಾಮ ಮತ್ತು ಸುತ್ತಮುತ್ತಲ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಉಡಿಅಕ್ಕಿ, ಸೀರೆ, ಅರಿಶಿನ ಕುಂಕುಮ ಅರ್ಪಿಸಿದರು. ಹರಕೆ ಹೊತ್ತ ಭಕ್ತರು ಹರಕೆ ತೀರಿಸಿ ಭಕ್ತಿ ಮೆರೆದರು.
ಆಂಜನೇಯಸ್ವಾಮಿ ದೇವಸ್ಥಾನದಿಂದ ಆಲಂಕಾರಗೊಂಡ ರಥದಲ್ಲಿ ಅಮ್ಮನವರನ್ನು ಪ್ರತಿಷ್ಠಾಪಿಸಿ, ನೂರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ದೇವಸ್ಥಾನದವರೆಗೆ ಎಳೆಯಲಾಯಿತು.
ದೇವಸ್ಥಾನ ಸಮಿತಿ ಮತ್ತು ಗ್ರಾಮಸ್ಥರು ರಥೋತ್ಸವದ ನೇತೃತ್ವ ವಹಿಸಿದ್ದರು.