ನ್ಯಾಮತಿ:ಮನುಷ್ಯರಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರು ಪ್ರೀತಿ, ವಿಶ್ವಾಸದೊಂದಿಗೆ ಶಾಂತಿ, ಸೌಹಾರ್ಧತೆಯಿಂದ ಬಾಳಬೇಕು ಎಂದು ಹಿರಿಯ ಸಾಹಿತಿ ನಾಗರಾಜಪ್ಪಅರ್ಕಾಚಾರ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರಕನ್ನಡ ಸಾಹಿತ್ಯ ಪರಿಷತ್ತುಕಚೇರಿಯಲ್ಲಿ ನಡೆದದತ್ತಿಉಪನ್ಯಾಸಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಶ್ರೀಮತಿ ಪಾರ್ವತಮ್ಮ ಶ್ರೀ ದೊಡ್ಡಮನೇರ ಮರಿಲಿಂಗಪ್ಪ ಜೀನಹಳ್ಳಿ ದತ್ತಿಯಲ್ಲಿ ನಂದೀಶ್ವರ ವಿಚಾರಕುರಿತುಎನ್.ಎಸ್.ರವೀಂದ್ರನಾಥ, ಸುಲೋಚನಮ್ಮ ,ಸಿದ್ದಪ್ಪ ಸ್ವಾತಂತ್ರ್ಯ ಹೋರಾಟಗಾರರದತ್ತಿ ವಿಶ್ವಕರ್ಮ ಬ್ರಾಹ್ಮಣರು ಮತ್ತು ಸಮಾಜಕುರಿತು ನಾಗರಾಜಪ್ಪ, ಹನಗವಾಡಿ ಸಿದ್ದಲಿಂಗಮ್ಮ ಮುದೇನೂರು ವೀರಪ್ಪದತ್ತಿಯಲ್ಲಿಜಾನಪದ ಸಾಹಿತ್ಯ ಕಲೆ, ವೀರಗಾಸೆಕುರಿತು ಸಾಹಿತಿ ಪಿ.ಎಂ.ಸಿದ್ದಯ್ಯ, ಸರ್ವಮಂಗಳಮ್ಮ ಮಹಾಶರಣ ಮಾಗನೂರು ಬಸಪ್ಪದತ್ತಿಯಲ್ಲಿ ಶರಣರಜೀವನದರ್ಶನ, ವಚನ ಸಾಹಿತ್ಯಕುರಿತು ಶಿಕ್ಷಕ ಎಂ.ಬಿ.ಶಿವಯೋಗಿ ಉಪನ್ಯಾಸ ನೀಡಿದರು.
ನಿಕಟಪೂರ್ವಅಧ್ಯಕ್ಷ ಜಿ.ನಿಜಲಿಂಗಪ್ಪ,ಗೌರವ ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗದೀಶ, ವೈದ್ಯ ಡಿ.ಬಸವರಾಜಪ್ಪ, ಶರಣ ಸಾಹಿತ್ಯ ಪರಿಷತ್ತುಅಧ್ಯಕ್ಷ ಸಿ.ಕೆ.ಭೋಜರಾಜ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಅಂಬಿಕಾ, ಎನ್.ಎಸ್.ಅರುಣಕುಮಾರ, ಈ ಸುಮಲತಾ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಡಿ.ಎಂ.ಹಾಲಾರಾಧ್ಯಅಧ್ಯಕ್ಷತೆ ವಹಿಸಿದ್ದರು.
ನಾಗರಾಜಪ್ಪಅರ್ಕಾಚಾರ್ ಮತ್ತು ವಿರೂಪಾಕ್ಷಚಾರ್, ಆರುಂಡಿ ಮಂಜಪ್ಪಅವರಿಂದ ಸಾಹಿತ್ಯ ಸಂಗೀತ ಸೇವೆ ನಡೆಯಿತು.

Leave a Reply

Your email address will not be published. Required fields are marked *