ನ್ಯಾಮತಿ: ತಾಲೂಕು ಗೋವಿನ ಕೋವಿ ಗ್ರಾಮದಲ್ಲಿ ಶುಕ್ರವಾರದಂದು ಇಂದು ಮೊದಲನೇ ಬೇಸಾಯ ಗ್ರಾಮಸ್ಥರಿಂದ ನಡೆಸಲಾಯಿತು. ಗ್ರಾಮದ ರೈತ ವಿ ಎಚ್ ರುದ್ರೇಶಪ್ಪ ಮೊದಲನೇ ಬೇಸಾಯ ಕುರಿತು ಮಾತನಾಡಿದ ಅವರು ನಮ್ಮ ಗ್ರಾಮದಲ್ಲಿ ಅಶ್ವಿನಿ ಮಳೆಗೆ ಮೊದಲನೆಯ ಬೇಸಾಯ ಮಾಡುವುದಿಲ್ಲ, ಭರಣಿ ಮಳೆ ಬಂದ ಮೇಲೆ ಮೊದಲ ಬೇಸಾಯ ಮಾಡುತ್ತೇವೆ. ಗ್ರಾಮದ ದೇವರಾದ ಶ್ರೀ ನರಸಿಂಹಸ್ವಾಮಿ ದೇವರು ಎಸ್ ಆರ್ ಬಸವರಾಜಪ್ಪ ಸಾಗನಹಳ್ಳಿಯವರ ಮನೆ ಯವರಿಂದ ಮೊದಲನೇ ಬೇಸಾಯವನ್ನು ಮಾಡಬೇಕೆಂದು ಸೂಚನೆ ಹಿನ್ನೆಲೆಯಲ್ಲಿ ಬಸವರಾಜಪ್ಪ ಎಂಬುವರ ಜಮೀನಿನಲ್ಲಿ ಮೊದಲನೇ ಬೇಸಾಯ ಮಾಡಿದ ನಂತರ ಗ್ರಾಮದ ಎಲ್ಲಾ ರೈತರು ಅವರವರ ಜಮೀನಿನಲ್ಲಿ ಬೇಸಾಯ ಮಾಡಿದರು ಎಂದು ತಿಳಿಸಿದರು. ಮುಖಂಡರಾದ ಕಡೆಮನಿ ಚಂದ್ರಪ್ಪ, ರಾಜಪ್ಪ, ಸತೀಶ್ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.