ನ್ಯಾಮತಿ:ಮಕ್ಕಳ ಶಿಕ್ಷಣದಲ್ಲಿ ಮಾತೃಭಾಷೆ ಶಿಕ್ಷಣಕ್ಕೆ ಪೋಷಕರುಒತ್ತು ನೀಡಬೇಕುಎಂದು ಫಲವನಹಳ್ಳಿ ಆಯುಷ್ ವೈದ್ಯಾಧಿಕಾರಿ ಲಿಂಗರಾಜೇಂದ್ರ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ನ್ಯಾಮತಿತಾಲ್ಲೂಕುಘಟಕದಿಂದ ಭಾನುವಾರ 110ನೇ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ, ಆರೋಗ್ಯರಕ್ಷಣೆ ಹಾಗೂ ಮತದಾನಜಾಗೃತಿಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಆಯುಷ್‍ಇಲಾಖೆಯತಂಪು ಪಾನೀಯತಯಾರಿಕೆ ಪ್ರಾತ್ಯಕ್ಷತೆ ನಡೆಸಿ ತಂಪು ಪಾನೀಯಚಿಂಚೂವನ್ನು ವಿತರಿಸಲಾಯಿತು.
ಕರ್ನಾಟಕರಾಜ್ಯ ಸರ್ಕಾರಿ ನೌಕರರ ಸಂಘದತಾಲ್ಲೂಕುಘಟಕದ ನೂತನಅಧ್ಯಕ್ಷಎಸ್.ಸಂತೋಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನಅಧ್ಯಕ್ಷೆ ಎಂ.ಸುಧಾಅವರನ್ನು ಕಸಾಪ ವತಿಯಿಂದಗೌರವಿಸಲಾಯಿತು.
ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯಅಧ್ಯಕ್ಷತೆ ವಹಿಸಿದ್ದರು.
ನಿಕಟಪೂರ್ವಅಧ್ಯಕ್ಷ ಜಿ.ನಿಜಲಿಂಗಪ್ಪ, ಗೌರವ ಕಾರ್ಯದರ್ಶಿಗಳಾದ ಎಸ್.ಜಿ.ಬಸವರಾಜಪ್ಪ, ಬಿ.ಜಿ.ಚೈತ್ರಾ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗದೀಶ, ಸಂಚಾಲಕ ಚಂದನಜಂಗ್ಲಿ, ವೆಂಕಟೇಶನಾಯ್ಕ, ಮಹಿಳಾ ಸಂಚಾಲಕಿ ಈ ಸುಮಲತಾ,ಕವಿತಾ ಬಳಿಗಾರ, ರವೀಂದ್ರಚಾರ್,ಪಾಲಾಕ್ಷಪ್ಪ, ಷಡಾಕ್ಷರಿ,ತೀರ್ಥಲಿಂಗಪ್ಪಕುಂಬಾರ, ಆಚೆಮನೆ ತಿಪ್ಪೇಸ್ವಾಮಿ, ಎಂ.ಬಿ.ಶಿವಯೋಗಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಅಂಬಿಕಾ, ಜಿ.ನಟರಾಜ, ನಾಗರಾಜ, ಕಮಲಮ್ಮ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *