ನ್ಯಾಮತಿ:ಪಟ್ಟಣದ ವೀರಭದ್ರೇಶ್ವರಸ್ವಾಮಿ ಷರಭೀ ಗುಗ್ಗಳ ಮತ್ತು ಕೆಂಡದಾರ್ಚನೆ ಧಾರ್ಮಿಕ ಕಾರ್ಯಕ್ರಮ ಮಂಗಳವಾರ ನಡೆಯಿತು.
ಈ ಸಲುವಾಗಿ ಮುಂಜಾನೆ ಕೋಹಳ್ಳಿಮಠದ ಎನ್.ಕೆ.ವಿಶ್ವರಾಧ್ಯರ ಪೌರೋಹಿತ್ಯದಲ್ಲಿ ವೀರಭದ್ರೇಶ್ವರಸ್ವಾಮಿಗೆ ರುದ್ರಾಭಿóಷೇಕ, ಮಹಾಮಂಗಳಾರತಿ ವಿವಿಧ ಪೂಜೆಗಳು ನೆರವೇರಿದ ನಂತರ ಕೆಂಡದಾರ್ಚನೆ ಕುಂಡಕ್ಕೆ ಪೂಜೆ ನೆರವೇರಿಸಿ ಅಗ್ನಿಸ್ಪರ್ಶಿಸಲಾಯತು. ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರಸ್ವಾಮಿ ಪ್ರತಿಷ್ಠಾಪಿಸಿ, ಪ್ರಾಣದೇವರು ಆಂಜನೇಯಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಜೋಡಿ ಷರಭೀಗುಗ್ಗಳ ಪುರುವಂತರ ಜೊತೆಗೂಡಿ ಸಕಲ ಮಂಗಳವಾಧ್ಯಗಳೊಂದಿಗೆ ಪಟ್ಟಣದಲ್ಲಿ ಸಂಚರಿಸಿತು. ಹರಕೆ ಹೊತ್ತ ಭಕ್ತರು ಕೆಲವರು ಗಲ್ಲಕ್ಕೆ ಮತ್ತು ಕೆಲವರು ಕೈಗೆ ಶಸ್ತ್ರ ಹಾಕಿಸಿಕೊಂಡರು. ಉತ್ಸವಮೂರ್ತಿ ಮರಳಿ ಬಂದ ನಂತರ ದೇವಸ್ಥಾನದ ಆವರಣದಲ್ಲಿ ನಿರ್ಮಾಣ ಮಾಡಿದ್ದ ಕೆಂಡವನ್ನು ದೇವರೊಂದಿಗೆ ಭಕ್ತರು ತುಳಿದು ಭಕ್ತಿ ಮೆರೆದರು.
ದೇವಸ್ಥಾನ ವತಿಯಿಂದ ಸಾಮೂಹಿಕಲ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.