ನ್ಯಾಮತಿ: ಸಮೀಪದದಾನಿಹಳ್ಳಿ ಗ್ರಾಮzಲ್ಲಿ ಮಂಗಳವಾರ ಪ್ರತಿವರ್ಷದ ಪದ್ದತಿಯಂತೆÀಚೌಡೇಶ್ವರಿದೇವಿಯ ಪರಾವು ನಡೆಯಿತು.ಆಂಜನೇಯ ಬಸವೇಶ್ವರ ದೇವತೆಗಳು ಪ್ರತಿಷ್ಠಾಪನೆಯಾಗಿರುವುದು.
ಗ್ರಾಮದ ಹೊರವಲಯದಲ್ಲಿರುವ ಗ್ರಾಮ ದೇವತೆ ಚೌಡೇಶ್ವರಿ ಅಮ್ಮನವರ ಪರಾವು ಪ್ರತಿವರ್ಷದ ಪದ್ಧತಿಯಂತೆ ಮಂಗಳವಾರ ನಡೆಯಿತು.
ಬಸವ ಜಯಂತಿ ನಂತರ ನಡೆಯುವ ದೇವಿಯ ಪರಾವಿಗೆ ವಿಶೇಷತೆ ಇದೆ.ಗ್ರಾಮಸ್ಥರೆಲ್ಲ ಒಗ್ಗೂಡಿ ದೇವಿಯ ಆರಾಧನೆ ಮಾಡುತ್ತಾರೆ. ದೇವಿಗೆ ಅಭಿಷೇಕ, ವಿಶೇóಷ ಆಲಂಕಾರ ಪೂಜೆ ಮಾಡಲಾಗುವುದು. ಅಂದು ಗ್ರಾಮ ದೇವತೆಗಳಾದ ಆಂಜನೇಯಸ್ವಾಮಿ ಮತ್ತು ಬಸವೇಶ್ವರ ಉತ್ಸವ ಮೂರ್ತಿಗಳೊಂದಿಗೆ ದೇವಿಯ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ.ವಿಶೇಷ ಎಂದರೆ ಇಲ್ಲಿ ಅನ್ನ,ಬಾಳೆಹಣ್ಣು ಹಾಲು ಮಾತ್ರ ಪ್ರಸಾದರೂಪವಾಗಿ ನೀಡಲಾಗುವುದು. ಹರಕೆ ಹೊತ್ತ ಭಕ್ತರು ಬಾಳೆಹಣ್ಣಿನ ಗೊನೆ ಹಾಗೂ ಗಾಡಿ ಮತ್ತು ಟ್ರ್ಯಾಕ್ಟರ್ಗಳಲ್ಲಿ ಪಾನಕವನ್ನು ತಯಾರಿಸಿ ಬಂದ ಭಕ್ತರಿಗೆಲ್ಲ ವಿತರಿಸುವ ಮೂಲಕ ಭಕ್ತಿ ಮೆರೆಯುತ್ತಾರೆ.
ಸಂಜೆ ಗ್ರಾಮಕ್ಕೆ ಮರಳಿದ ದೇವರ ಉತ್ಸವ ಮೂರ್ತಿಗಳು ಇಡೀಗ್ರಾಮವನ್ನು ಪ್ರದಕ್ಷಣೆ ಹಾಕುತ್ತವೆ. ಪ್ರತಿ ಮನೆಯವರೂ ಮನೆ ಮುಂದೆ ದೀಪಗಳನ್ನು ಹಚ್ಚಿ, ಮಂಗಳಾರತಿ ಎತ್ತಿ ಹಣ್ಣು ಕಾಯಿ ಮಾಡಿಸುತ್ತಾರೆ.
ಬೇರೆಡೆ ನೆಲಸಿರುವ ಗ್ರಾಮದಜನರು ಈ ಪರಾವಿಗೆ ತಪ್ಪದೇ ಆಗಮಿಸುತ್ತಾರೆ. ನ್ಯಾಮತಿ-ದಾನಿಹಳ್ಳಿ ರಸ್ತೆಯಲ್ಲಿರುವ ದೇವಿಯ ಶಕ್ತಿ ಅಪಾರವಾಗಿದೆ.ಈ ಭಾಗದಲ್ಲಿಯಾವುದೇ ಅಪಘಾತಗಳು ಸಂಭವಿಸಿದರು ಇದುವರೆವಿಗೂ ಪ್ರಾಣಹಾನಿ ಆಗದೆಇರುವುದುದೇವಿಯ ಪವಾಡಎನ್ನುತ್ತಾರೆಗ್ರಾಮಸ್ಥರು.