ನ್ಯಾಮತಿ: ತಾಲೂಕು ಸೂರಗೊಂಡನಕೊಪ್ಪದ ಬಾಯ್‍ಗಡ್ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ವತಿಯಿಂದ ಬುದ್ಧ ಪೂರ್ಣಿಮೆ ನಿಮಿತ್ತ ಮೂರ್ತಿ ಪ್ರತಿಷ್ಠಾಪನೆಯ 27ನೆಯ ವರ್ಷದ ವಾರ್ಷಿಕೋತ್ಸವದ ಸಮಾರಂಭದ ಪೂರ್ವಭಾವಿ ಸಭೆಯನ್ನು ಇಂದು ನಡೆಸಲಾಯಿತು.
ಹನುಮಂತನಾಯ್ಕ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ನಂತರ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಬಾಯ್ ಗಡ್ ಕ್ಷೇತ್ರದಲ್ಲಿ ಮೇ 23ರಂದು ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುವುದು ಅದೇ ದಿನ. ಗುರುವಾರ ಬೆಳಗ್ಗೆ 6 ಗಂಟೆಗೆ ಮಾತೆ ಮರಿಯಮ್ಮದೇವಿ ಹಾಗೂ ಸಂತ ಸೇವಾಲಾಲ್ ಅವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರುವುದು. ತದನಂತರ 9 ಗಂಟೆಗೆ ಉತ್ಸವ ಮೂರ್ತಿಗಳೊಂದಿಗೆ ಪಲ್ಲಕ್ಕಿ ಉತ್ಸವ ಜರಗುವುದು .
ನಂತರ, 9:30ಕ್ಕೆ ಮಹಾಭೋಗ ಸಮರ್ಪಣೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ತದನಂತರ ಬೆಳಗ್ಗೆ 11:30 ಕ್ಕೆ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ ಜರುಗಲಿದೆ.
ಆ ಕಾರ್ಯಕ್ರಮದಲ್ಲಿ ಶ್ರೀ ಸಂತ ಸೇವಾಲಾಲ್ ರವರ ಇತಿಹಾಸ ಹಾಗೂ ಬುದ್ಧ ಪೂರ್ಣಿಮಾ ಬಗ್ಗೆ ಸಂತರು ಮತ್ತು ಸಮಾಜದ ಶ್ರೀಗಳು ಹಾಗೂ ರಾಜಕಾರಣಿಗಳು ಸೇವಾಲಾಲ್ ಅವರ ಇತಿಹಾಸವನ್ನು ಧಾರ್ಮಿಕ ಹಾಗೂ ಸಾಂಸ್ಕøತಿಕ ನೆಲಗಟ್ಟಿನಲ್ಲಿ ಚಿಂತನೆ ನಡೆಸಲಾಗುವುದು. ಇದರಲ್ಲಿ ಮೇ 22ರಂದು ಬಂದಂತ ಸರ್ವ ಭಕ್ತಾದಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳುತ್ತಾ ದೇವಸ್ಥಾನದ ಸರ್ವ ಸಲಹಾ ಸಮಿತಿ ಸದಸ್ಯರು ಗಳಿಗೆ ಒಂದೊಂದು ಜವಾಬ್ದಾರಿಯನ್ನು ನೀಡುವ ಮೂಲಕ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಚುನಾವಣೆ ನೀತಿ ಸಮ್ಮಿತಿ ಇರುವ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತದೆ ಎಂದು ಹೇಳುತ್ತಾ, ಬೇರೆ ಬೇರೆ ಜಿಲ್ಲೆಗಳಿಂದ ಸರ್ವ ಭಕ್ತಾದಿಗಳು ಬಂದು ಕಾರ್ಯಕ್ರಮವನ್ನು ಯಶಸ್ಸುಗೊಳಿಸಿ ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಗೆ ಭಕ್ತಿ ಪಾತ್ರರಾಗಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ನರೇಹಳ್ಳಿ ಅರುಣ್, ಸಮಿತಿಯ ನಿರ್ದೇಶಕರುಗಳಾದ ಜಯನಾಯ್ಕ, ಶಿವಾಜಿನಾಯ್ಕ್ ಶಿವರಾಮ್‍ನಾಯ್,್ಕ ಯೋಗೇಶ್‍ನಾಯ್,್ಕ ಮಾರುತಿನಾಯ್ಕ್, ಸುರೇಂದ್ರನಾಯ್ಕ್, ಸೋಮ್ಲಾನಾಯ್ಕ್ ,ಗೋಪಾಲ್‍ನಾಯ್ಕ, ಮಂಜುನಾಯ್ಕ. ರಮೇಶ್‍ನಾಯ್ಕ. ಸವಿತಮಂಜುನಾಯ್ಕ, ಹರೀಶ್ ಮತ್ತು ಸೇವ್ಯಾನಾಯ್ಕ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *