ನ್ಯಾಮತಿ ;ತಾಲ್ಲೂಕು ಸಂತ ಸೇವಾಲಾಲ್ಜನ್ಮಸ್ಥಾನ ಭಾಯಾಗಡ್ನಲ್ಲಿಗುರುವಾರ ಸಂತ ಸೇವಾಲಾಲ್, ಮರಿಯಮ್ಮದೇವಿ 27ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬುದ್ಧ ಪೂರ್ಣಿಮಾ ಅಂಗವಾಗಿ ನಡೆದ ಭೋಗ್(ಹೋಮಕುಂಡ) ಕಾರ್ಯಕ್ರಮದಲ್ಲಿ ಮಹಾಮಠ ಸಮಿತಿಯವರು ಮತ್ತು ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಸಿದರು.
ಬುದ್ಧಗುರುಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್ದಾರ್ಶನಿಕಎಂದು ನಿವೃತ್ತ ಪ್ರಾಧ್ಯಾಪಕ,ಚಿಂತಕ ಸಣ್ಣರಾಮಪ್ಪಅಭಿಪ್ರಾಯಪಟ್ಟರು.
ತಾಲ್ಲೂಕಿನ ಭಾಯಾಗಡ್ಕ್ಷೇತ್ರದಲ್ಲಿ ಸಂತ ಸೇವಾಲಾಲ್ಜನ್ಮಸ್ಥಾನ ಮಹಾಮಠ ಸಮಿತಿಯಿಂದಗುರುವಾರ ನಡೆದ ಸಂತ ಸೇವಾಲಾಲ್ ಮತ್ತು ಮಾತೆ ಮರಿಯಮ್ಮದೇವಿಯ 27ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬುದ್ಧ ಪೂರ್ಣಿಮಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕಕಾರ್ಯಕ್ರಮದಲ್ಲಿ ಪಾಲ್ಗೊಂಡುಅವರು ಮಾತನಾಡಿದರು.
ಬುದ್ಧ ವೈಚಾರಿಕತೆಯ ಮೂಲಕ ಮಾನವಕುಲದಲ್ಲಿಅರಿವು ಮೂಡಿಸಿದರು. ಮೌಢ್ಯ, ಕಂದಾಚಾರಗಳ ವಿರುದ್ಧಜಾಗೃತಿ ಮೂಡಿಸಿ, ಸಮಾಜದಲ್ಲಿ ಪಂಚ ಸೂತ್ರಗಳನ್ನು ಭೋದಿಸಿದರು. ವ್ಯಭಿಚಾರ, ಮದ್ಯವ್ಯಸನ, ಬೇರೆಯವರಿಗೆ ಮೋಸ ಮಾಡುವುದು, ಸುಳ್ಳು ಹೇಳುವುದು, ಕಳ್ಳತನ ಮಾಡುವುದು ಸೇರಿದಂತೆ ಸಮಾಜದಲ್ಲಿಕ್ಷೋಭೆಉಂಟು ಮಾಡುವಂತಹಯಾವುದೇ ಘಟನೆಗಳನ್ನು ಮನುಷ್ಯ ಪರಿಪಾಲನೆ ಮಾಡಬಾರದೆಂದು ಬುದ್ಧಗುರು ಸಂದೇಶ ಸಾರಿದರು.
ಬುದ್ಧಜಗತ್ತಿಗೆಧ್ಯಾನ, ಜ್ಞಾನದ ಮೂಲಕ ಮಹಾಬೆಳಕು ನೀಡಿದರು. ಬುದ್ಧ ನೊಂದ ಸಮಾಜದಲ್ಲಿ ಪ್ರೀತಿ,ವಿಶ್ವಾಸ,ಕಾರುಣ್ಯವನ್ನುತೋರಿಸುವುದರ ಮೂಲಕ ಸಮಾಜದಲ್ಲಿದು:ಖಿತರು, ಅಸಮಾನತೆಯಲ್ಲಿ ಬದುಕು ನಡೆಸುತ್ತಿರುವವರಿಗೆ ಸಮಾನತೆ ತತ್ವಭೋದಿಸಿದ ಮಹಾಗುರುಎಂದು ಸಂತ ಸೇವಾಲಾಲ್ಜನ್ಮಸ್ಥಾನ ಮಹಾಮಠ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣಕುಮಾರ ಹೇಳಿದರು.
ಮಹಾಮಠ ಸಂಸ್ಥಾಪಕ ಸದಸ್ಯ ವೈದ್ಯಎಲ್. ಈಶ್ವರನಾಯ್ಕ ಮಾತನಾಡಿ, ಬುದ್ಧ ಪೂರ್ಣಿಮಾ ದಿನದಂದು ಸಂತ ಸೇವಾಲಾಲ್ ಮತ್ತು ಮರಿಯಮ್ಮಮೂರ್ತಿಗಳನ್ನು 26 ವರ್ಷಗಳ ಹಿಂದೆ ಪ್ರತಿಷ್ಠಾಪಿಸುವ ಮೂಲಕ ಬಂಜಾರ ಸಮುದಾಯಕ್ಕೆ ಶಾಂತಿಯ ಸಂದೇಶವನ್ನುರವಾನೆ ಮಾಡಲಾಗಿದೆಎಂದರು.
ಮಹಾಮಠ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರನಾಯ್ಕ ಮಾತನಾಡಿ, ಬುದ್ಧನ ವಿಚಾರಗಳು ಎಲ್ಲಾ ಕಾಲಕ್ಕೂ ಸತ್ಯ ಹಾಗಾಗಿ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಸೇವಾಲಾಲರ ವಿಚಾರಗಳು ಬಂಜಾರ ಸಮುದಾಯವನ್ನು ವೈಚಾರಿಕತೆಯಕಡೆಗೆಕೊಂಡೊಯ್ಯಲಿದೆ ಎಂಬ ಭರವಸೆ ನಮಗಿದೆಎಂದರು.
ಚಿತ್ರದುರ್ಗ ಬಂಜಾರಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ದುಬ್ಬದಹಳ್ಳಿ ಶಿವಪ್ರಕಾಶ ಸ್ವಾಮೀಜಿ, ಅರ್ಚಕ ಸೇವಾಸಾಧು, ಉಪಾಧ್ಯಕ್ಷಕುಮಾರನಾಯ್ಕ, ಧರ್ಮದರ್ಶಿ ಪರಿಷತ್ತಿನ ಸದಸ್ಯ ಭೋಜ್ಯಾನಾಯ್ಕ, ಖಜಾಂಚಿ ಕೆ.ಟಿ.ನಾಗರಾಜ, ನಿರ್ದೇಶಕರುಗಳಾದ ಪಾಂಡುರಂಗನಾಯ್ಕ, ಚಂದ್ರಶೇಖರನಾಯ್ಕ, ಸೌಮ್ಯಾ ಬಿ ನಾಯ್ಕ, ಜಾನಾನಾಯ್ಕ, ಸಹಕಾರ್ಯದರ್ಶಿ ಸವಿತಾಬಾಯಿ,ಹೀರಾಲಾಲ್, ಗೋಶಾಲಾ ಸಮಿತಿಯಅಧ್ಯಕ್ಷ ನಾನ್ಯಾನಾಯ್ಕ, ಕುಮಾರನಾಯ್ಕ, ಅಂಜಲಿಬಾಯಿ ಇದ್ದರು.
ಸಮಾರಂಭದಅಧ್ಯಕ್ಷತೆಯನ್ನು ನಿರ್ವಹಣಾ ಸಮಿತಿಅಧ್ಯಕ್ಷ ಹನುಮಂತನಾಯ್ಕಎನ್. ವಹಿಸಿದ್ದರು.