ನ್ಯಾಮತಿ:ಹಲವು ದಶಕಗಳಿಂದ ಕಾಂಗ್ರೆಸ್‍ನಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ದಾವಣಗೆರೆ ಜಿಲ್ಲಾಕಾಂಗ್ರೆಸ್ ಘಟಕದ ಅಧ್ಯಕ್ಷರೂ ಆಗಿರುವ ಎಚ್.ಬಿ.ಮಂಜಪ್ಪಅವರಿಗೆ ಎಂಎಲ್‍ಸಿ ಸ್ಥಾನ ನೀಡಬೇಕು ಎಂದು ನ್ಯಾಮತಿ ತಾಲ್ಲೂಕು ಬಂಜಾರ ಸಮುದಾಯದ ಕಾಂಗ್ರೆಸ್ ಮುಖಂಡರು ಪಕ್ಷದ ವರಿಷ್ಠರಿಗೆ ಸೋಮವಾರ ಮನವಿ ಮಾಡಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರಾಮನಾಯ್ಕ, ರಾಜ್ಯ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.ಅವುಗಳ ಪೈಕಿ 5 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಈ ಸಂದರ್ಭದಲ್ಲಿಎಚ್.ಬಿ.ಮಂಜಪ್ಪಅವರ ಸೇವೆ ಮತ್ತು ಹಿರಿತನವನ್ನು ಪರಿಗಣಿಸಿ ಎಂಎಲ್‍ಸಿ ಸ್ಥಾನ ನೀಡಬೇಕು ಎಂದರು.
ಮಂಜಪ್ಪಅವರು ಕಳೆದ ಮೂರು ದಶಕಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ.2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಅವರ ಹೆಸರನ್ನು ಘೋಷಣೆ ಮಾಡಿತ್ತು.ಕೊನೆಗಳಿಗೆಯಲ್ಲಿ ಅವರಿಗೆಟಿಕೆಟ್ ತಪ್ಪಿಸಲಾಯಿತು.2018 ಮತ್ತು 2024ರ ಚುನಾವಣೆಯಲ್ಲೂ ಅವರ ಹೆಸರು ದೆಹಲಿ ಮಟ್ಟಕ್ಕೆ ಹೋಗಿಯೂ ಟಿಕೆಟ್ ಸಿಗಲಿಲ್ಲ ಎಂದರು.
2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಅವರಿಗೆ ಟಕೆಟ್ ಕೊಡಬೇಕಾಗಿತ್ತು, ಆದರೆ ಎಸ್.ಎಸ್.ಮಲ್ಲಿಕಾರ್ಜುನ ಅವರ ಪತ್ನಿಗೆ ಟಿಕೆಟ್ ನೀಡುವ ಸುಳಿವು ಸಿಕ್ಕಿದ್ದರಿಂದ ಮತ್ತುಎಸ್‍ಎಸ್‍ಎಂ ಸೂಚನೆಯಂತೆ ತಟಸ್ಥರಾದರು.ಇಷ್ಟಾದರೂ ಅವರುಎಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆ ಮಾಡಲಿಲ್ಲ. ಪಕ್ಷಕ್ಕೆ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಶಾಸಕ ಡಿ.ಜಿ.ಶಾಂತನಗೌಡಅವರ ಗೆಲುವಿಗೆ ಶ್ರಮಿಸಿದರು. ಈಗ ಡಾ.ಪ್ರಭಾ ಪರವಾಗಿ ಪ್ರಚಾರ ಮಾಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿ ಸಿಟಿಕೆಟ್ ನೀಡುವಂತೆ ಪಕ್ಷದಜಿಲ್ಲಾ ಮುಖಂಡರಾದ ಶಾಸಕ ಶ್ಯಾಮನೂರು ಶಿವಶಂಕರಪ್ಪ, ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಮತಿ ತಾಲ್ಲೂಕು ಬಂಜಾರ ಸಮುದಾಯ ಘಟಕದ ಅಧ್ಯಕ್ಷ ಎಂ.ಭೋಜ್ಯನಾಯ್ಕ, ಸಾಲಬಾಳು ಎಸ್.ಎನ್.ಗೋಪಾಲನಾಯ್ಕ, ಓಂಕಾರನಾಯ್ಕ, ಪಿ.ಪಿರ್ಯಾನಾಯ್ಕ, ಸೋಮ್ಲನಾಯ್ಕ, ಯಂಕ್ಯಾನಾಯ್ಕ ಬಿ.ಸಿ.ವಸಂತನಾಯ್ಕ, ರೇಣುನಾಯ್ಕ, ಸಂತೋಷನಾಯ್ಕ, ನಾರಾಯಣನಾಯ್ಕ, ಚಂದ್ರನಾಯ್ಕ ಹಾಗೂ ವಿವಿಧ ಗ್ರಾಮಗಳ ಬಂಜಾರ ಮುಖಂಡರು ಇದ್ದರು.