ನ್ಯಾಮತಿ:ಭಾಯಾಗಡ್ ಸೇವಾಲಾಲ್‍ ಜನ್ಮಸ್ಥಾನ ಸೂರಗೊಂಡನಕೊಪ್ಪದ ಭಾಯಾಗಡ್‍ನಲ್ಲಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರುಸೇನೆ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯಮಟ್ಟದ ಮೂರು ದಿನದ‘ ರೈತ ಚಳುವಳಿಯ ನಾಯಕತ್ವದ’ಶಿಬಿರ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಜಗದೀಶನಾಯ್ಕ ಬುಧವಾರ ಮಾಹಿತಿ ನೀಡಿದರು.
ಮೇ 31ರಂದು ಬದುಕು ಭರವಸೆಯತ್ತ: ರೈತಾಪಿ ಯುವಜನರ ಕೃಷಿ ಸವಾಲುಗಳು ಮತ್ತು ಸಾಧ್ಯತೆಗಳು ಕುರಿತು ಕೆ.ಟಿ.ಗಂಗಾಧರ,ಕಳೆದೆರೆಡು ತಲೆಮಾರುಗಳಿಂದ ಇಲ್ಲಿಯವರೆಗು ಕೃಷಿ ಕ್ಷೇತ್ರದಲ್ಲಾದ ಬದಲಾವಣೆಗಳನ್ನು ಗುರುತಿಸುವುದುಚರ್ಚೆಯನ್ನು ಮನೋಹರ ಪಟೇಲ್,ರಮೇಶ, ಸ್ವಾತಂತ್ರ್ಯ ನಂತರದಲ್ಲಿ ಕೃಷಿ ಸಂಬಂಧಿಸಿ ಸರ್ಕಾರದ ಧೋರಣೆಗಳು ಮತ್ತು ಪರಿಣಾಮಗಳು ಕುರಿತು ವಿಜ್ಞೇಶ ಮತ್ತುರಮೇಶ, ಮೊದಲು ಶಿಬಿರದ ನಂತರಯುವಜನರದೃಷ್ಟಿಕೋನದಲ್ಲಾದ ಬದಲಾವಣೆ ಶಿಬಿರಾರ್ಥಿಗಳ ಅನುಭವ ಹಂಚಿಕೆ ನಳಿನಿ ಮತ್ತು ಮಂಜುಕಿರಣಅವರಿಂದ.
ಜೂನ್ 1ರಂದು ಹವಮಾನ ಬದಲಾವಣೆ ಮತ್ತುಕೃಷಿಯಮೇಲೆ ಇದರ ಪ್ರಭಾವಕುರಿತು ಎಲ್.ಸಿ.ನಾಗರಾಜ, ಆರ್ಥಿಕ ಸುಧಾರಣೆ ನೀತಿಗಳು ಮತ್ತುಕೃಷಿಯ ಮೇಲಾದ ಪರಿಣಾಮ ಸಂವಾದ ನಂದಿನಿ ಜಯರಾಮ, ಕೃಷಿಯಲ್ಲಿಜ್ಞಾನರಾಜಕೀಯಕುರಿತು ಎಲ್.ಸಿ.ನಾಗರಾಜ, ವಿಷಯಾಧಾರಿತ ಗುಂಪುಗಳ ರಚನೆ ಪ್ರಾಯೋಗಿಕವಾಗಿ ಕೆಲಸ ಮಾಡಲುತಯಾರಿ ಮಂಜುಶರ್ಮ, ಮನೋಹರ, ರಮೇಶ ಭಾಗವಹಿಸಲಿದ್ದಾರೆ.
ಜೂನ್2ರಂದು ಜಾಗತೀಕರಣ ವಿರೋಧಿ ಚಳುವಳಿಯಾಗಿರೈತ ಚಳುವಳಿ ಹೆಜ್ಜೆ ಗುರುತುಗಳು ಮಾತುಕತೆಯಲ್ಲಿ ಚುಕ್ಕಿ ನಂಜುಂಡಸ್ವಾಮಿಅವರೊಂದಿಗೆ ವಿಡಿಯೋ ಮಾತುಕತೆ. ಇಂದಿನ ಕೃಷಿ ಬಿಕ್ಕಟ್ಟನ್ನು ಎದುರುಗೊಳ್ಳಲು ನಾಯಕತ್ವ ಹೇಗಿರಬೇಕು ಸಂವಾದವನ್ನುರಾಜೇಂದ್ರ ಚುಕ್ಕಿ ನಡೆಸಿಕೊಡಲಿದ್ದಾರೆ.ನಂತರ ಸಮಾರೋಪ ಸಮಾರಂಭ ನಡೆಯಲಿದೆಎಂದರು.
ಆಸಕ್ತ ರೈತಯುವಕರು ಹೆಚ್ಚಿನ ಮಾಹಿತಿಗಾಗಿ 81975 03017 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *