ನ್ಯಾಮತಿ:ತಂಬಾಕು ಸೇವನೆ ವಿಷಕ್ಕೆ ಸಮಾನಆದರೂಜನರುಅದರ ವ್ಯಸನದಿಂದಾಗಿಜೀವಕ್ಕೆಅಪಾಯ ತಂದುಕೊಳ್ಳುತ್ತಾರೆ ಎಂದು ನಿವೃತ್ತಉಪನ್ಯಾಸಕ ಸಾಹಿತಿ ಗಂಜೀನಹಳ್ಳಿ ಬಸವರಾಜಪ್ಪಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಮತ್ತುರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿಆಯೋಜಿಸಲಾಗಿದ್ದ ‘ವಿಶ್ವತಂಬಾಕು ವಿರೋಧಿ’ ದಿನಾಚರಣೆಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಭಾರತಅತಿ ಹೆಚ್ಚು ತಂಬಾಕು ಸೇವನೆ ಮಾಡುವ ರಾಷ್ಟ್ರವಾಗಿದ್ದು ಸುಮಾರು 26 ಕೋಟಿತಂಬಾಕು ಬಳಕೆ ಮಾಡಲಾಗುತ್ತದೆ.ಇವರಲ್ಲಿ ಸಿಗರೇಟ್, ಹುಕ್ಕಾ ತಾಂಬೂಲ, ಗುಟ್ಕಾ ಹೀಗೆ ಎಲ್ಲಾರೀತಿಯತಂಬಾಕು ಬಳಕೆದಾರರು ಒಂದುಧೂಮಪಾನ ಮತ್ತು ಬಾಯಿಯಲ್ಲಿಜಗಿದುತಿನ್ನುವುದರ ಮೂಲಕ ಕ್ಯಾನ್ಸ್‍ರ್‍ಅಪಾಯ ಹೆಚ್ಚುತ್ತದೆಎಂದರು.
ತಾಲ್ಲೂಕುಯೋಜನಾಧಿಕಾರಿ ಶಾಂತರಾಮಮಾತನಾಡಿ, ತಂಬಾಕು ಸೇವನೆಯಿಂದಉಂಟಾಗುವ ಹಾನಿಯ ಬಗ್ಗೆ ಜನರಿಗೆಅರಿವು ಮೂಡಿಸಲು ಪ್ರತಿವರ್ಷ ಮೇ 31ರಂದು ವಿಶ್ವತಂಬಾಕುರಹಿತ ದಿನವನ್ನುಆಚರಿಸಲಾಗುತ್ತಿದೆಎಂದರು.
ಪ್ರಭಾರ ಪ್ರಾಂಶುಪಾಲೆಎನ್.ಜ್ಯೋತಿಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀನಿವಾಸನಾಡಿಗ, ಹವಳದ ಲಿಂಗರಾಜ, ಎಂ.ಯು.ನಟರಾಜ, ಸಿಡಿಸಿ ಸದಸ್ಯ ಹೊಸಮನೆ ಮಲ್ಲಿಕಾರ್ಜುನ, ಸೇವಾಪ್ರತಿನಿಧಿ ಶಂಕ್ರಮ್ಮ, ವಲಯ ಮೇಲ್ವಿಚಾರಕ ಮಧುಸೂದನ, ಕಾಲೇಜಿನಅಧ್ಯಾಪಕರು ಉಪಸ್ಥಿತರಿದ್ದರು.