ಜೂನ್ 1 ರಂದು ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಂದೋಲನದ ಅಂಗವಾಗಿ ನಗರದಲ್ಲಿ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಹಾಗೂ ಬಾಲ್ಯಾವಸ್ಥೆ & ಕಿಶೋರಾವಸ್ಥೆ(ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ಕುರಿತು ವಿವಿಧ ಅಂಗಡಿ, ಹೋಟೆಲ್, ಗ್ಯಾರೇಜ್ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಶನಿವಾರ ಅಧಿಕಾರಿಗಳ ತಂಡ ಭೇಟಿ ನೀಡಲಾಯಿತು.
  ತಪಾಸಣೆಯಲ್ಲಿ 3 ಕಿಶೋರ ಕಾರ್ಮಿಕರು ಅಪಾಯಕಾರಿ ಉದ್ದಿಮೆಯಲ್ಲಿ ಪತ್ತೆಯಾಗಿದ್ದು, ಪತ್ತೆಯಾದ ಕಿಶೋರ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಮಾಲೀಕರಿಗೆ ಕರಪತ್ರ & ಸ್ಟೀಕ್ಕರ್ಸ್ ನೀಡಿ ಜಾಗೃತಿ ಮೂಡಿಸಿದರು.
   ಕಾರ್ಮಿಕ ನಿರೀಕ್ಷಕರಾದ ರಾಜಶೇಖರ್ ಹಿರೇಮಠ್, ರಾಜಪ್ಪ.ಟಿ, ಆರ್.ನಾಗೇಶ್ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಮಮತಾ ಮತ್ತು ವಿರೇಶ್, ಶಿಶು ಸಹಾಯಕ ಅಭಿವೃದ್ದಿ ಅಧಿಕಾರಿ ಪ್ರಿಯದರ್ಶಿನಿ, ಯೋಜನಾ ನಿರ್ದೇಶಕ ಪ್ರಸನ್ನ ಇ.ಎನ್ ಹಾಜರಿದ್ದರು.
=====

Leave a Reply

Your email address will not be published. Required fields are marked *