ನ್ಯಾಮತಿ: ವಿಧಾನ ಪರಿಷತ್ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಸೋಮುವಾರ ಚುನಾವಣೆ ನಡೆಯಿತು.
ನ್ಯಾಮತಿ ತಾಲೂಕಿನಲ್ಲಿ 1012ಕ್ಕೆ 804 ಪದವಿದರು ಮತದಾನ ಮಾಡಿದ್ದಾರೆ. ಅದರಲ್ಲಿ ಪುರುಷ ಪದವೀಧರರು 509ಹಾಗೂ ಮಹಿಳಾ ಪದವೀಧರರು 295 ಮತದಾನ ಚಲಾಯಿಸಿದ್ದಾರೆ. ಶಿಕ್ಷಕ ಮತದಾರರು 76ಕ್ಕೆ 71 ಮತ ಚಲಾಯಿಸಿ ಅದರಲ್ಲಿ ಶಿಕ್ಷಕರು 57 ಶಿಕ್ಷಕಿಯರು 14 ಒಟ್ಟು 71ಮತದಾನ ಮಾಡಿದ್ದಾರೆ,
ಪದವೀಧರ ಕ್ಷೇತ್ರದ ಒಟ್ಟು ಮತದಾನ 79%, ಶಿಕ್ಷಕರ ಕ್ಷೇತ್ರದ ಮತದಾನ 93% ಆಗಿದೆ ಎಂದು ನ್ಯಾಮತಿ ತಹಸಿಲ್ದಾರ ತಿಳಿಸಿದ್ದಾರೆ.