ಲೋಕಸಭಾ ಚುನಾವಣೆ ಮತ ಎಣಿಕೆಯು ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿಯಲ್ಲಿ ಜೂನ್ 4 ರಂದು ಎಣಿಕೆ ನಡೆಯುವುದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಮತ್ತು ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಯುವ ಸಲುವಾಗಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿ¬ ಬೆಳಿಗ್ಗೆ 6.00ಗಂಟೆ ಯಿಂದ ಸಂಜೆ 6.00 ಗಂಟೆ ವರೆಗೆ ಮತ ಎಣಿಕೆ ಕೇಂದ್ರದ ಮುಂದೆ ಹಾದು ಹೋಗುವ ಬೀರೂರು-ಸಮ್ಮಸಗಿ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿ, ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಡಾ.ವೆಂಕಟೇಶ್ ಎಂ.ವಿ. ಆದೇಶಿಸಿದ್ದಾರೆ.
ವಾಹನ ಸಂಚಾರ ಮಾರ್ಗ ; ದಾವಣಗೆರೆ ಯಿಂದ ಸಂತೆಬೆನ್ನೂರು, ಚನ್ನಗಿರಿಗೆ ಹೋಗುವ ವಾಹನ ಸವಾರರು ಶಿರಮಗೊಂಡನಹಳ್ಳಿ, ಹದಡಿ ಮೂಲಕ ಚನ್ನಗಿರಿ ಕಡೆಗೆ ಹೋಗುವುದು.
ಚನ್ನಗಿರಿ ಕಡೆಯಿಂದ ಸಂತೆಬೆನ್ನೂರು ಮಾರ್ಗವಾಗಿ ದಾವಣಗೆರೆ ಕಡೆಗೆ ಬರುವವರು ಕುರ್ಕಿಯ ಹತ್ತಿರ ಎಡ ತಿರುವು ತೆಗೆದುಕೊಂಡು ಹದಡಿ ಗ್ರಾಮದಿಂದ ದಾವಣಗೆರೆ ಕಡೆಗೆ ಬರುವುದು ಹಾಗೂ ಚಿತ್ರದುರ್ಗ ಕಡೆಗೆ ಹೋಗುವವರು ಕುರ್ಕಿ ಗ್ರಾಮದ ಹತ್ತಿರ ಬಲ ತಿರುವು ತೆಗೆದುಕೊಂಡು ಆನಗೋಡು ಮುಖಾಂತರ ಚಿತ್ರದುರ್ಗ, ಬೆಂಗಳೂರು ಕಡೆಗೆ ಹೋಗಬೇಕು ಎಂದು ತಿಳಿಸಿದ್ದಾರೆ.