ನ್ಯಾಮತಿ: ತಾಲೂಕ ಕಚೇರಿಯಲ್ಲಿ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಆನೂರು ಮಂಜುನಾಥ ಪರವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತದಾರ ಪಟ್ಟಿಯಲ್ಲಿ ಪದವೀಧರರಿಗೆ ಮತ್ತು ಶಿಕ್ಷಕರಿಗೆ ಮತದಾರರ ಚೀಟಿ ನೀಡುತ್ತಿರುವದನ್ನು ಮಾಹಿತಿ ಪಡೆದ ಶಾಸಕ ಡಿ ಜಿ ಶಾಂತನಗೌಡ್ರು. ಜಿಲ್ಲಾಧ್ಯಕ್ಷ ಎಚ್ ಬಿ ಮಂಜಪ್ಪ. ಸಾಸ್ವಿಹಳ್ಳಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆರ್ ನಾಗಪ್ಪ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಡಿಜಿ ವಿಶ್ವನಾಥ್. ಸಂತೋಷ್ ಕರಿಬಸಪ್ಪ ಇನ್ನು ಮುಂತಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಇದ್ದರು.