ನ್ಯಾಮತಿ: ತಾಲೂಕು ಗೋವಿನಕೋವಿ ಗ್ರಾಮದಲ್ಲಿ ಇಂದು ಗುರುವಾರ ಬೆಳಗ್ಗೆ 10 ಗಂಟೆಗೆ ಸಮಯಕ್ಕೆ ಗೋವಿನ ಕೋವಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸೇರಿ ಕೆಎಸ್
ಆರ್ ಟಿ ಸಿ ಬಸ್ ತಡೆದು ದಿಡೀರ್ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ದಾವಣಗೆರೆ ಹರಿಹರ ಮತ್ತು ಶಿವಮೊಗ್ಗಕ್ಕೆ ಮಾರ್ಗವಾಗಿ ತೆರಳುವ ಕೆ ಎಸ್ ಆರ್ ಟಿ ಸಿ ತಡೆರಹಿತ ಬಸ್ಸುಗಳು ಗೋವಿನ ಕೋವಿ ಗ್ರಾಮದಲ್ಲಿ ನಿಲುಗಡೆ ಮಾಡುತ್ತಿಲ್ಲ. ಪ್ರತಿನಿತ್ಯ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಹಾಗೂ ಶಿವಮೊಗ್ಗ ನಗರಕ್ಕೆ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ತುಂಬಾ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಸುಮಾರು ಒಂದರಿಂದ ಎರಡು ಗಂಟೆಗಳ ಕಾಲ ಬಸ್ಸುಗಳನ್ನು ತಡೆದು ಪ್ರತಿಭಟಿಸಿದರು. ಬಸ್ಸಿನಲ್ಲಿ ಇರುವ ಸಾರ್ವಜನಿಕರಿಗೆ ಕೆಲವೊಂದಿಷ್ಟು ಕಾಲ ತೊಂದರೆ ಆಯಿತು. ಗ್ರಾಮಸ್ಥರಿಂದ ತಾಲೂಕಿನ ಶಾಸಕರಾದ ಡಿ ಜಿ ಶಾಂತನಗೌಡ್ರುರವರಿಗೆ ಫೆÇೀನಿನ ಕರೆಯ ಮೂಲಕ ಗ್ರಾಮಸ್ಥರಿಂದ ಹಾಗೂ ವಿದ್ಯಾರ್ಥಿಗಳಿಂದ ಬಸ್ಸುಗಳನ್ನು ತಡೆದು ಪ್ರತಿಪಡಿಸುತ್ತಿದ್ದಾರೆ ಎಂದು ತಿಳಿಸಿದಾಗ, ಶಾಸಕರು ಕೆಎಸ್‍ಆರ್‍ಟಿ ಬಸ್ಸಿನ ಡಿಪೆÇೀ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ, ಪ್ರತಿಭಟಿಸುತ್ತಿರುವ ಸ್ಥಳಕ್ಕೆ ತಕ್ಷಣವೇ ಭೇಟಿ ಕೊಡಬೇಕು, ದಿನ ನಿತ್ಯ ವಿದ್ಯಾರ್ಥಿಗಳಿಗೆ ಮತ್ತು ಶಿವಮೊಗ್ಗ ಪಟ್ಟಣಕ್ಕೆ ದುಡಿಮೆಗಾಗಿ ತೆರಳುವಂಥ ಸಾರ್ವಜನಿಕರಿಗೆ ಬೆಳಗ್ಗೆ 7,30ರಿಂದ 11 ಗಂಟೆಯವರೆಗೆ ಹೆಚ್ಚುವರಿ ಬಸ್ಸುಗಳನ್ನು ಬಿಟ್ಟು ಸಾರ್ವಜನಿಕರ ಸಮಸ್ಯೆಗಳಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದಾಗ, ಶಿವಮೊಗ್ಗ ಕೆಎಸ್ ಆರ್ ಟಿ ಸಿ ಬಸ್ಸಿನ ಡಿವಿಜನ್ ಆಫೀಸರ್ ದಿನೇಶ್ ಮತ್ತು ನ್ಯಾಮತಿ ಪೆÇಲೀಸ್ ಇನ್ಸ್ಪೆಕ್ಟರ್ ತಕ್ಷಣವೇ ಪ್ರತಿಭಟನೆ ಸ್ಥಳಕ್ಕೆ ದೌಡಾಯಿಸಿ ಬಂದು ಪ್ರತಿಭಟನೆ ನಿರತರನ್ನ ಸಮಾಧಾನಪಡಿಸಿ ಹಿಂಪಡೆಯುವಂತೆ ಮನವಿ ಮಾಡಿದರು

.
ನಂತರ ಶಿವಮೊಗ್ಗ ಕೆ ಎಸ್ ಆರ್ ಟಿ ಸಿ ಡಿವಿಜನ್ ಆಫೀಸರ್ ದಿನೇಶ್ ಪ್ರತಿಭಟನೆ ನಿರತ ಕುರಿತು ಮಾತನಾಡಿದ ಅವರು ಬೆಳಗ್ಗೆ 7:30 ರಿಂದ 11 ಗಂಟೆಯವರೆಗೆ ಸುಮಾರು ಮೂರು ನಾಲ್ಕು ಬಸ್ಸುಗಳನ್ನು ವ್ಯವಸ್ಥೆಯನ್ನ ಮಾಡಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಗುವ ತೊಂದರೆ ಬಗೆಹರಿಸುತ್ತೇನೆ ಎಂದು ತಿಳಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆದರು.
ಟ್ರಾಫಿಕ್ ಇನ್ಸ್ಪೆಕ್ಟರ್ ಗದ್ದಿಗೇಶ, ಪೆÇಲೀಸ್ ಇನ್ಸ್ಪೆಕ್ಟರ್ ರವಿ ಎನ್ ಎಸ್, ಪಿಎಸ್ ಐ ಪ್ರವೀಣ್, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, ಬಸವರಾಜ್, ಪೆÇಲೀಸ್ ಮಂಜುನಾಥ್ ಗ್ರಾಮಸ್ಥರಾದ ಮಧುಸೂದನ್ ಎ ಎಸ್, ನಾಗರಾಜ್ ಕೈಂಕರಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ಸ್ಥಳದಲ್ಲಿ ಇದ್ದರು.
