ನ್ಯಾಮತಿ: ಹೊನ್ನಾಳಿ ತಾಲ್ಲೂಕಿನ ಬಿದರಗಡ್ಡೆ 220/66/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಹೋಗುವ 220 ಕೆವಿ ಮತ್ತು 66 ಕೆವಿ ವಿದ್ಯುತ್ ವಿತರಣಾ ಮಾರ್ಗಗಳ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಬಿದರಗಡ್ಡೆ ವಿದ್ಯುತ್ ವಿತರಣಾ ಕೇಂದ್ರ ಇವರು ದಿನಾಂಕ 13ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರಗೆ ಹಮ್ಮಿಕೊಂಡಿರುತ್ತಾರೆ.
ಆದಕಾರಣ ಅಂದು ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ನ್ಯಾಮತಿ, ಸವಳಂಗ, ಚೀಲೂರು ಮತ್ತು ಕತ್ತಿಗೆ ವಿತರಣಾ ಕೇಂದ್ರಗಳಿಂದ ವಿದ್ಯುತ್ ಪೂರೈಕೆಯಾಗುವ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸಹಾಯಕ ಎಂಜಿನಿಯರ್ ಬಿ.ಕೆ.ಶ್ರೀನಿವಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.