ನ್ಯಾಮತಿ: ತಾಲೂಕು ದೂಡ್ಡೇರಿ ಗ್ರಾಮದಲ್ಲಿ ಇಂದು ಶ್ರೀ ಮಂಜುನಾಥ ಸ್ವಾಮಿ ಒಕ್ಕೂಟ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಶಾಲೆಯ ಆವರಣದಲ್ಲಿ 101 ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮುಖ್ಯ ಶಿಕ್ಷಕ ಎಂ ಆರ್ ನಾಗರಾಜ್ ಕುಂದೂರು. ಒಕ್ಕೂಟದ ಮೇಲ್ವಿಚಾರಕ ಎಂ ಎನ್ ಗದ್ದಿಗೆಪ್ಪ, ರೇಖಾ, ಚೀಲೂರು ಮಹಿಳಾ ಪ್ರತಿನಿಧಿ ಸದಸ್ಯರು ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು.