ನ್ಯಾಮತಿ ಬಹುದಿನಗಳ ಬೇಡಿಕೆಯಾದ ಕೆಎಸ್ಆರ್ ಟಿಸಿ ಬಸ್ಸ ಸೌಲಭ್ಯ ಇಲ್ಲದೆ ಪರದಾಡುತ್ತಿದ್ದ ನ್ಯಾಮತಿ ಪಟ್ಟಣ ಮತ್ತು ತಾಲೂಕು ಸೇರಿದಂತೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಹಿನ್ನೆಲೆಯಲ್ಲಿ ಬಸ್ಸು ವ್ಯವಸ್ಥೆ ಕಲ್ಪಿಸಿ ಇಂದು ಅಧಿಕೃತವಾಗಿ ಚಾಲನೆ ನೀಡಿದ್ದೇನೆ ಎಂದು ಶಾಸಕ ಡಿ ಜಿ ಶಾಂತನಗೌಡ್ರು ತಿಳಿಸಿದರು.
ಕೆಎಸ್ ಆರ್ ಟಿ ಸಿ ಬಸ್ ಚಾಲನೆ ನೀಡಿ ನಂತರ ಮಾತನಾಡಿದ ಅವರು ನ್ಯಾಮತಿ ಭಾಗದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ದಿನನಿತ್ಯ ಶಿವಮೊಗ್ಗಕ್ಕೆ ತೆರಳಲು ಬೆಳಗಿನ ಜಾವ 8:00ಗೆ ಸಮಯಕ್ಕೆ ಬಸ್ ಇಲ್ಲದೆ ಪರದಾಡುತ್ತಿದ್ದರು. ಸುಮಾರು ಬಾರಿ ಸಾರ್ವಜನಿಕರಿಂದ ಬಸ್ ಬಿಡಿಸಬೇಕು ಎಂದು ಒತ್ತಾಯ ಮಾಡಿದ್ದರು. ಆ ವಿಷಯವನ್ನು ತೆಗೆದುಕೊಂಡು ಅಧಿವೇಶನ ನಡೆಯುವ ಸಂದರ್ಭದಲ್ಲಿ ಧ್ವನಿ ಎತ್ತುವ ಕೆಲಸ ನಾನು ಮಾಡಿದ್ದೆ, ಅದರ ಫಲವಾಗಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿಗೆ 40 ಬಸ್ಸುಗಳ ಬೇಡಿಕೆ ಇಟ್ಟಿದ್ದೆ ಅದರ ಫಲವಾಗಿ ರಾಜ್ಯ ಸರ್ಕಾರ 17 ಬಸುಗಳನ್ನು ನೀಡಿದ್ದು, ಹಂತ ಹಂತವಾಗಿ ಇನ್ನುಳಿದ ಬಸ್ಸುಗಳನ್ನು ಅವಳಿ ತಾಲೂಕಿನ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳ ಸದ್ಬಳಕೆಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಾರ್ವಜನಿಕರ ಸಮ್ಮುಖದಲ್ಲಿ ತಿಳಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಬಸ್ಸಿಗೆ ಪೂಜೆ ಮಾಡಿ ಸಂತಸ ವ್ಯಕ್ತಪಡಿಸಿ ಪಟಾಕಿ ಸಿಡಿಸಿ ಶಾಸಕರಿಗೆ ಜೈಕಾರ ಕೂಗಿ ಸಿಹಿ ಹಂಚಿ ಸಂಭ್ರಮಿಸಿದರು.
ನ್ಯಾಮತಿ ತಾಲೂಕಿನ ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಕೋಡಿಕೊಪ್ಪ ಶಿವಣ್ಣ. ಪಕ್ಷದ ಮುಖಂಡರಾದ ವಾಗೀಶ್ ನುಚ್ಚಿನ್. ನಗರ ಘಟಕದ ಅಧ್ಯಕ್ಷ ಗುಂಡೂರ್ ಲೋಕೇಶ್. ಡಿಪೋ ಮ್ಯಾನೇಜರ್ ಮಹೇಶ್ವರಪ್ಪ ಸೇರಿದಂತೆ ಅವರ ಸಿಬ್ಬಂದಿ ವರ್ಗ ಷಣ್ಮುಖಪ್ಪ, ಕರಿಬಸಪ್ಪ ಡಿ‌ಸ್, ಮಲ್ಲಿಕಾರ್ಜುನ್ ವನಜಾಕ್ಷಮ್ಮ ಚೆನ್ನಮ್ಮ ಇನ್ನು ಮುಂತಾದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *