ಹೊನ್ನಾಳಿ ಜೂ15 ಪಟ್ಟಣದಲ್ಲಿರುವ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಇಂದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು.
ಅಧ್ಯಕ್ಷರ ಗಾದಿಗೆ ಎಚ್ಬಿ ಬಸವರಾಜ್ ಹಿರೇಮಠ ಉಪಾಧ್ಯಕ್ಷರ ಗಾದೆಗೆ ಬಸವರಾಜ್ ಬಸವನಹಳ್ಳಿ ಚುನಾವಣೆಕಾರಿಗೆ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ ನಿರ್ದೇಶಕರುಗಳು ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಬಸವರಾಜ ಎಚ್ ಬಿ ಹಿರೇಮಠ ಉಪಾಧ್ಯಕ್ಷರಾಗಿ ಬಸವರಾಜ್ ಬಸವನಹಳ್ಳಿ ಇವರಿಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಹಾಗೂ ಸಿಡಿಓ ನವೀನರವರು ಘೋಷಣೆ ಮಾಡಿದರು.
ಶಾಸಕರಾದ ಡಿ ಜಿ ಶಾಂತನಗೌಡ್ರರವರು ನೂತನ ಅಧ್ಯಕ್ಷರು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ನಿರ್ದೇಶಕರುಗಳಾದ ಗಜೇಂದ್ರಪ್ಪ ಎಂ ಹೆಚ್, ಮಂಜುನಾಥ ಡಿ, ಶೇಖರಪ್ಪ ಹೆಚ್ ಸಿ, ಎಚ್ಜಿ ಶಂಕರಮೂರ್ತಿ, ಸಿದ್ದನಗೌಡ ಕೆ ಬಿ, ನಾಗಮ್ಮ, ಬರಮಪ್ಪ, ಅನಂತ್ ನಾಯ್ಕ, ಮುಖ್ಯ ಕಾರ್ಯನಿರ್ವಣಾಧಿಕಾರಿ ಮುರುಗೇಶ್, ಗೋಪಿ, ಸುರೇಶ್, ಅರುಣ್ ಇನ್ನೂ ಮುಂತಾದವರು ಭಾಗವಹಿಸಿದ್ದರು.