ಹೊನ್ನಾಳಿ ತಾಲೂಕು ಅರಬಗಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು. ಈ ಹಿಂದೆ ಅಧ್ಯಕ್ಷರ ಗಾದೆ ತೆರವಾದ ಹಿನ್ನೆಲೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿಗಳನ್ನು ಚುನಾವಣಾ ಅಧಿಕಾರಿಗಳಿಗೆ ತಲವೊಂದರಂತೆ ಎರಡು ಸದಸ್ಯರು ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರು ಅರ್ಜಿ ಸಲ್ಲಿಸದೇ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಶ್ರೀನಾಥ್ ಡಿ ಬಿ ಸುಂಕದಕಟ್ಟೆ ಉಪಾಧ್ಯಕ್ಷರಾಗಿ ಶ್ರೀಮತಿ ಅನಿತಾ ಡಿಕೆ ಇವರುಗಳನ್ನ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಮೃತ್ಯುಂಜಯ ಟಿಎಂ ಅವರು ಘೋಷಣೆ ಮಾಡಿದರು.
ದಾವಣಗೆರೆ ಡಿಸಿಸಿ ಬ್ಯಾಂಕಿನ ನಿರ್ದೇಶಕರ ಡಿಎಸ್ ಸುರೇಂದ್ರ ಅವರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಗಳಿಗೆ ಅಭಿನಂದನೆ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎಂಜಿ ಸುರೇಶ್, ಜಯಮ್ಮ, ಡಿಎಂ ರೇಣುಕಮ್ಮ, ಕರಿಯಮ್ಮ, ಹಳದಮ್ಮ, ಯು,ಬಿ ಚಂದ್ರಮ್ಮ ಎಸ್ ಆರ್ ಮಂಜುನಾಥ್, ಪಿಡಿಓ ಶ್ವೇತಾ, ಕಾರ್ಯದರ್ಶಿ ಕಾಂತರಾಜ್, ಪೋಲಿಸ್ ಸುನಿಲ್, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಇದ್ದರು.