ನ್ಯಾಮತಿ:ತಾಲ್ಲೂಕಿನ ಸವಳಂಗ ಗ್ರಾಮ ಪಂಚಾಯಿತಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಸಮ ಮತಗಳು ಬಂದ ಹಿನ್ನಲೆಯಲ್ಲಿ ಲಾಟರಿಎತ್ತುವ ಮೂಲಕ ಅಧ್ಯಕ್ಷರ ಆಯ್ಕೆ ಮಾಡಲಾಯಿತು.
ಈ ಹಿಂದಿನ ಅಧ್ಯಕ್ಷ ಸಿ.ರಾಜಪ್ಪ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ಒಟ್ಟು 13 ಸದಸ್ಯರ ಬಲದಗ್ರಾಮ ಪಂಚಾಯಿತಿಯಲ್ಲಿಅಧ್ಯಕ್ಷ ಸ್ಥಾನಕ್ಕೆ ನಾಗರಾಜನಾಯ್ಕ,ಬಸವರಾಜಪ್ಪ ಮತ್ತುಗಿರೀಶ ಪಟೇಲ ನಾಮಪತ್ರ ಸಲ್ಲಿಸಿದ್ದು, ಅವರಲ್ಲಿ ನಾಗರಾಜನಾಯ್ಕಅವರಿಗೆಒಂದು ಮvವೂ ಬಂದಿರಲಿಲ್ಲ. ಬಸವರಾಜಪ್ಪ ಮತ್ತುಗಿರೀಶ ಪಟೇಲ ಅವರಿಗೆತಲಾ 6 ಮತಗಳು ಬಂದರೆ, ಒಂದು ಮತ ಅಸಿಂಧು ಆಯಿತು. ಈ ಹಿನ್ನಲೆಯಲ್ಲಿ ಸರ್ವ ಸದಸ್ಯರಅಭಿಪ್ರಾಯದಂತೆ ಬಸವರಾಜಪ್ಪ ಮತ್ತುಗಿರೀಶ ಪಟೇಲ ಹೆಸರುಗಳನ್ನು ಲಾಟರಿಚೀಟಿಯಲ್ಲಿ ಬರೆದುಎತ್ತಿದಾಗಗಿರೀಶ ಪಟೇಲ ಅವರುಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಪ್ರಭಾರ ಬಿಇಒ ತಿಪ್ಪೇಶಪ್ಪಕರ್ತವ್ಯ ನಿರ್ವಹಿಸಿದರು.ಚುನಾವಣೆ ಪ್ರಕ್ರಿಯೆಯಲ್ಲಿಉಪಾಧ್ಯಕ್ಷೆ ನಿಂಗಮ್ಮ, ಸದಸ್ಯರಾದ ಸಿ.ರಾಜಪ್ಪ, ಬಸವರಾಜಪ್ಪ, ಲಲಿತಮ್ಮ, ರತ್ನಮ್ಮ, ಗಾಯತ್ರಿ, ಗಿರೀಶಪಟೇಲ, ರುಕ್ಮೀಣಿಬಾಯಿ, ನೇತ್ರಾವತಿ, ಕೃಷ್ಣಪ್ಪ, ವಸಂತಾ, ನಾಗರಾಜನಾಯ್ಕ, ನೀಲಾಬಾಯಿ ಪಾಲ್ಗೊಂಡಿದ್ದರು.
ಪಿಡಿಒ ವೇದಾವತಿ ಮತ್ತು ಸಿಬ್ಬಂದಿ ಸಹಕರಿಸಿದರು.