ನ್ಯಾಮತಿ: ಸರ್ಕಾರ ನೌಕರರಿಗೆಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಇಲಾಖೆಗಳಿಂದ ಆಗುವ ಕೆಲಸದ ಸಲುವಾಗಿ ನಿಮ್ಮ ಬಳಿ ಬರುವ ಸಾರ್ವಜನಿಕರಿಗೆ ಪ್ರಮಾಣಿಕವಾಗಿ ಕೆಲಸ ಮಾಡಿಕೊಡಿಎಂದು ಶಾಸಕ ಡಿ.ಜಿ.ಶಾಂತನಗೌಡ ಸಲಹೆ ನೀಡಿದರು.
ಪಟ್ಟಣದಲ್ಲಿ ಶನಿವಾರ ನ್ಯಾಮತಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನೂತನಅಧ್ಯಕ್ಷರಅಧಿಕಾರ ಸ್ವೀಕಾರ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸಂಘದ ವಾರ್ಷಿಕ ಮಹಾಸಭೆಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನುಒಂದು ವಾರದೊಳಗೆ ಮಳೆ ಬಾರದಿದ್ದರೆರೈತರು ಬಹಳ ಸಂಕಷ್ಟಕ್ಕೆ ಸಿಲುಕುತ್ತಾರೆ.ದೇವರದಯೆಯಿಂದ ಮಳೆ ಬರಲಿ ಎಂದುಎಲ್ಲರೂ ಪ್ರಾರ್ಥಿಸೋಣ.ಇಂತಹ ಸಮಯದಲ್ಲಿರೈತರ ಬಗ್ಗೆ ನೌಕರರು ವಿಶೇಷ ಕಾಳಜಿ ವಹಿಸಿ ಎಂದರು.
ನೌಕರರ ಭವನ ನಿರ್ಮಾಣಕ್ಕೆಅನುದಾನ ನೀಡುವಂತೆ ನೌಕರರ ಸಂಘದವರು ಮನವಿ ಮಾಡಿದ್ದೀರಿ, ನಾನು ರೂ 25 ಲಕ್ಷ ನೀಡುತ್ತೇನೆ, ಉಳಿದಂತೆ ಎಂಎಲ್ಸಿ ಅನುದಾನ, ರಾಜ್ಯ ಮತ್ತುಜಿಲ್ಲಾ ನೌಕರರ ಸಂಘದಿಂದಅನುದಾನ ಹಾಗೂ ತಾಲೂಕಿನ ಪ್ರತಿಯೊಬ್ಬ ನೌಕರರಿಂದದೇಣಿಗೆ ಸಂಗ್ರಹಿಸಿ ಭವನ ನಿರ್ಮಾಣಕ್ಕೆ ಮುಂದಾಗಿಎಂದು ಸಲಹೆ ನೀಡಿದರು.
ನಿಕಟಪೂರ್ವಅಧ್ಯಕ್ಷಎಂ.ಬಿ.ನಿಂಗಪ್ಪಅವರಿಂದ ನೂತನಅಧ್ಯಕ್ಷಎಸ್.ಸಂತೋಷ, ನಿಕಟಪೂರ್ವರಾಜ್ಯ ಪರಿµತ್ತು ಸದಸ್ಯ ಸುಧೀರಅವರಿಂದ ವಿಶ್ವನಾಥಅಧಿಕಾರ ಸ್ವೀಕರಿಸಿದರು.
ಸರ್ಕಾರಿ ನೌಕರರಮಕ್ಕಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರನ್ನು ಸಂಘದ ವತಿಯಿಂದಗೌರವಿಸಲಾಯಿತು.
ನಿಕಟಪೂರ್ವಅಧ್ಯಕ್ಷ ಎಂ.ಬಿ.ನಿಂಗಪ್ಪಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರೌಢಶಾಲಾ ಸಹಶಿಕ್ಷಕರ ಸಂಘದರಾಜ್ಯಘಟಕದಅಧ್ಯಕ್ಷ ಬಿ.ಸಿದ್ದಬಸಪ್ಪ, ಉಪವಿಭಾಗಾಧಿಕಾರಿ ವಿ.ಅಭಿಷೇಕ, ಜಿಲ್ಲಾಘಟಕದಅಧ್ಯಕ್ಷ ವೀರೇಶಎಸ್.ಒಡೇನಪುರ,ಗೌರವಾಧ್ಯಕ್ಷ ಬಿ.ಪಾಲಾಕ್ಷಿ, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ಹೊನ್ನಾಳಿ ಘಟಕದಅಧ್ಯಕ್ಷ ಪಾಟೀಲ, ಬಿಇಒ ಎಂ. ತಿಪ್ಪೇಶಪ್ಪ, ಅಕ್ಷರದಾಸೋಹರುದ್ರಪ್ಪ, ಬಿಸಿಎಂ ಅಧಿಕಾರಿ ಟಿ.ಎಂ.ಮೃತ್ಯುಂಜಯಸ್ವಾಮಿ, ಸಮಾಜಕಲ್ಯಾಣಾಧಿಕಾರಿಎಚ್.ಎಲ್.ಉಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಜಿಲ್ಲಾಘಟಕದಅಧ್ಯಕ್ಷ ಡಿ.ರಾಮ¥,್ಪ ತಾಲ್ಲೂಕುಘಟಕದಅಧ್ಯಕ್ಷೆ ಸುಧಾ, ಎಸ್.ಆರ್.ಗಿರಿಜಮ್ಮ,ಆಂಜನೇಯ,ಶಿವಪದ್ಮ ಕೆ. ಕೆಂಚಮ್ಮ,ಜಿ.ರಾಘವೇಂದ್ರ, ಜಿ.ಬಿ.ವಿಜಯಕುಮಾರ,ನ್ಯಾಮತಿ ನಾಗರಾಜ,ಟಿ.ಎಲ್.ಜಗದೀಶ, ಡಿ.ಎಂ.ಹಾಲಾರಾಧ್ಯ, ಸಿದ್ದಪ್ಪ ಜಿಗಣಪ್ಪನವರ, ಎಂ.ಮಲ್ಲಿಕಾರ್ಜುನ ಉಪಸ್ಥಿತರಿದ್ದರು.