ನ್ಯಾಮತಿ:ಮಾದಕ ವಸ್ತುಗಳಿಂದ ದೂರವಿರಿ, ಉತ್ತಮ ಭವಿಷ್ಯದ ಬಗ್ಗೆ ಚಿಂತನೆ ಮಾಡಿಎಂದು ವಿದ್ಯಾರ್ಥಿಗಳಿಗೆ ನ್ಯಾಮತಿಠಾಣೆಇನ್ಸ್ಪೆಕ್ಟರ್ಎನ್.ಎಸ್.ರವಿ ಕಿವಿಮಾತು ಹೇಳಿದರು.
ಪಟ್ಟಣದಲ್ಲಿ ಬುಧವಾರಮಾದಕ ವಸ್ತುಗಳ ದುರುಪಯೋಗ ಮತ್ತುಅಕ್ರಮ ಸಾಗಾಣಿಕೆ ವಿರುದ್ಧಅಂತರರಾಷ್ಟೀಯ ದಿನ ಅಂಗವಾಗಿ ನಡೆದ ವಿದ್ಯಾರ್ಥಿಗಳ ಜಾಥಾದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಯುವಕರುಅದರಲ್ಲೂ ವಿದ್ಯಾರ್ಥಿಗಳು ಕುತೂಹಲಕ್ಕಾಗಿ ಮಾದಕ ವಸ್ತುಗಳ ಚಟವನ್ನು ಅಂಟಿಸಿಕೊಳ್ಳುತ್ತಿರುವುದು ಜಾಸ್ತಿಯಾಗಿದೆ.ಇದರಿಂದತಮ್ಮ ಭವಿವ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೊಲೀಸ್ಇಲಾಖೆಯಜೊತೆಗೆ ಪೋಷಕರು,ಶಿಕ್ಷಕರು,ಸಂಘ ಸಂಸ್ಥೆಗಳು ಹೀಗೆ ಎಲ್ಲರೂ ಸೇರಿ ಮಾದಕ ವಸ್ತುಗಳ ವಿರುದ್ಧ ಸಮರ ಸಾರಿದಾಗ ಮಾತ್ರಇದನ್ನುತಡೆಯಲು ಸಾಧ್ಯಎಂದರು.
ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪಜಾಥಾಕ್ಕೆ ಚಾಲನೆ ನೀಡಿದರು.
ಸಬ್ಇನ್ಸ್ಪೆಕ್ಟರ್ ಬಿ.ಎಲ್.ಜಯಪ್ಪನಾಯ್ಕ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಣೇಶರಾವ,ಕೆಪಿಎಸ್ಎನ್ಎಸ್ಎಸ್ಘಟಕಾದಿಕಾರಿಗಂಗಾಧರ ನವಲೆ, ಹೆಡ್ಕಾನ್ಸ್ಸ್ಟೇಬಲ್ ಕೆ.ಮಂಜಪ್ಪ ಮತ್ತು ಸಿಬ್ಬಂದಿಗಳು, ಸಾಮಾಜಿಕಕಾರ್ಯಕರ್ತ ನುಚ್ಚಿನ ಸುಧೀರ, ಉಪನ್ಯಾಸಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾಜಾಥಾ ನಡೆಸಿದರು.