ನ್ಯಾಮತಿ:ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜೂನ್ 27 ಮತ್ತು 28ರಂದು ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಹಿಳಾ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಟಿ.ಸಿ.ಭಾರತಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಜೂನ್ 27ರಂದು ಬೆಳಿಗ್ಗೆ 10ಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.ದಾವಣಗೆರೆ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಸಂಘದ ಅಧ್ಯಕ್ಷ ಎಚ್.ತಿಪ್ಪೇಸ್ವಾಮಿ,ಕ್ರೀಡಾಧಿಕಾರಿ ಬಿ.ಎಚ್.ವೀರಪ್ಪ,ಕಾರ್ಯದರ್ಶಿ ಕೆ.ಎಂ.ವೀರೇಂದ್ರ, ಉಪಕಾರ್ಯದರ್ಶಿ ದಂಬಳ್ಳಿ ಬಸವರಾಜ,ಸಂಘಟನಾ ಕಾರ್ಯದರ್ಶಿ ಎಂ.ಎಸ್.ಗಿರೀಶ ಪಾಲ್ಗೊಳ್ಳಲಿದ್ದಾರೆ.
ಜೂನ್ 28ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಹುಮಾನ ವಿತರಿಸಲಿದ್ದಾರೆ.ದೈಹಿಕಶಿಕ್ಷಣ ನಿರ್ದೇಶಕರ ಸಂಘದ ಉಪಾಧ್ಯಕ್ಷ ಸಿ.ಶಂಕರಪ್ಪ ಅಧ್ಯಕ್ಷತೆವಹಿಸಲಿದ್ದು, ಕಾಲೇಜಿನ ಪ್ರಾಧ್ಯಾಪಕ ಡಿ.ಶಿವಕುಮಾರ, ಜಿ.ಆರ್.ರಾಜಶೇಖರ, ಜಿ.ಪಿ.ರಾಘವೇಂದ್ರ, ಸೈಯದ್ ಇಮ್ರಾನ್ ತಾಸೀರ್, ಆರ್.ಸಿದ್ದಲಿಂಗಸ್ವಾಮಿ, ವೆಂಕಪ್ಪನವರ ಬಸವರಾಜ, ಎಂ.ಬಿ.ರೇವಣಸಿದ್ದಪ್ಪ, ಸಂಗಪ್ಪ ಔರಸಂಗ, ಪೇಮಾ ಹಳೇಗೌಡ್ರ,ಎನ್ ಎನ್ ಎಸ್ ಎಸ್ ಘಟಕಾಧಿಕಾರಿ ಎನ್.ದಯಾನಂದ ಮೂರ್ತಿ ಹಾಗೂ ಆಡಳಿತಾತ್ಮಕ ಸಿಬ್ಬಂದಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ದಾವಣಗೆರೆ ವಿಶ್ವವಿದ್ಯಾವಿದ್ಯಾಲಯವ್ಯಾಪ್ತಿಯ ಅಂದಾಜು 25 ಕಾಲೇಜುಗಳ ವಿದ್ಯಾರ್ಥಿನಿಯರು ಭಾಗವಹಿಸುವ ನಿರೀಕ್ಷೆ ಇದೆ,ಕೊಕ್ಕೊ,ಕಬಡಿ,ವಾಲಿಬಾಲ್,ಥ್ರೋಬಾಲ್,ಹ್ಯಾಂಡ್ ಬಾಲ್,ಬಾಲ್ ಬ್ಯಾಡ್ಮಿಂಟನ್, ಟೆನ್ನಿಕಾಯ್ಟ್ ಪಂದ್ಯಗಳು ನಡೆಯಲಿವೆ ಎಂದು ಕ್ರೀಡಾಕೂಟ ಸಂಯೋಜಕ ಎಂ. ಎಸ್.ಗಿರೀಶ ತಿಳಿಸಿದರು. ಅಧ್ಯಾಪಕರು,ಸಿಡಿಸಿ ಸದಸ್ಯರು ಉಪಸ್ಥಿತರಿದ್ದರು.