ನ್ಯಾಮತಿ ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಸಾಮಾನ್ಯ ಸಭೆ ನಡೆಯಿತು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಹು ದಿನಗಳ ಕಾಲ ಸಾಮಾನ್ಯ ಸಭೆಯು ನೆನೆಗುದಿಗೆ ಬಿದ್ದಿತ್ತು. ಇಂದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿ ಕುಂದು ಕೊರತೆಗಳ ವಿಚಾರವಾಗಿ ಸಾಮಾನ್ಯ ಸಭೆಯಲ್ಲಿ ಕಾರ್ಯಕಲಾಪದ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆದವು. ಮುಸ್ಯೇನಾಳ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ನಾಯ್ಕ್ ರವರು ಗ್ರಾಮದ ಸಮಸ್ಯೆಗಳ ವಿಷಯವಾಗಿ ಬಹು ಮುಖ್ಯವಾಗಿ ಮುಸ್ಯೇನಾಳ ಗ್ರಾಮದಲ್ಲಿ ಸುಮಾರು ವರ್ಷಗಳ ಕಾಲ ಆ ಗ್ರಾಮಕ್ಕೆ ಈ ಸ್ಪತ್ತ್ ಇಲ್ಲದೆ ಸಾರ್ವಜನಿಕರಿಗೆ ಯಾವುದೇ ಸರ್ಕಾರಿ ಸೌಲತ್ತುಗಳನ್ನು ಪಡೆಯಲಿಕ್ಕೆ ಆಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಇದರೊಂದಿಗೆ ನಮ್ಮ ಗ್ರಾಮದಲ್ಲಿ ಸ್ಮಶಾನದ ವ್ಯವಸ್ಥೆ ಇಲ್ಲದಂತಾಗಿದೆ ಖಾಲಿ ನಿವೇಶನಗಳಿಗೆ ಪಟ್ಟ ಸಿಗುತ್ತಿರಲಿಲ್ಲ , ಇದರ ವಿಷಯವಾಗಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮತ್ತು ತಹಶೀಲ್ದಾರಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು ಸಹ ಬಗೆಹರಿದಿಲ್ಲ. ಹೀಗಾಗಿ ತಮ್ಮ ಸಿಟ್ಟನ್ನು ಪಿಡಿಓ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಉತ್ತರವಾಗಿ ಎದ್ದು ನಿಂತ ಅಧ್ಯಕ್ಷ ಪ್ರವೀಣರವರು ಜಿಲ್ಲಾ ಪಂಚಾಯಿತಿ ಸಿಇಓ ಸುರೇಶ್ ಹಿಟ್ನಾಳ್ ರವರಿಗೆ ಗಂಜಿನಳ್ಳಿ ಗ್ರಾಮ ಸೇರಿದಂತೆ ಇನ್ನು ಹತ್ತು ಹಲವಾರು ಸಮಸ್ಯೆಗಳನ್ನ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ, ಹಾಗೂ ಸರ್ವ ಸದಸ್ಯರ ನಿಯೋಗವನ್ನು ತಗೆದುಕೊಂಡು ಹೋಗಿ ಮನವಿ ಪತ್ರ ಸಲ್ಲಿಸೋಣ ಎಂದು ಸಮಾಧಾನಪಡಿಸಿದರು. ಅಧ್ಯಕ್ಷರಾದ ಪ್ರವೀಣ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಹಿಟ್ನಾಳ್ ರವರು ಮುಸ್ಯೇನಾಳ ಗಂಜೇನಹಳ್ಳಿ ಗ್ರಾಮಕ್ಕೆ ಈ ಸ್ಪತ್ ಕೊಡಿಸದಿದ್ದರೆ ಸರ್ವ ಸದಸ್ಯರು ರಾಜೀನಾಮೆ ನೀಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸರ್ವ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶಕುಂತಲಾಬಾಯಿ, ಸದಸ್ಯರುಗಳಾದ ಜಯ ಶ್ರೀ,ಶ್ರೀಮತಿ ಅನಿತಾ, ಗೋವಿಂದರಾಜ ಎಂ ಸಿ, ನೇತ್ರಮ್ಮ, ನಾಗೇಶನಾಯ್ಕ್ , ನಟರಾಜ್, ಪಿಡಿಓ ಜ್ಯೋತಿ ಶೆಟ್ಟಿ ಕೆಎಂ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಸಹ ಇದ್ದರು.

Leave a Reply

Your email address will not be published. Required fields are marked *