ನ್ಯಾಮತಿ:ಶಾಲಾ-ಕಾಲೇಜುಗಳ ಕ್ರೀಡೆಗಳಲ್ಲಿ ವಿದ್ಯಾರ್ಥಿನಿಯರು ಸೌಹಾರ್ಧಯುತವಾಗಿ ಸ್ಪರ್ಧಿಸಬೇಕುಎಂದು ಶಾಸಕ ಡಿ.ಜಿ.ಶಾಂತನಗೌಡ ಸಲಹೆ ನೀಡಿದರು.
ನ್ಯಾಮತಿ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿಗುರುವಾರದಿಂದಎರಡು ದಿನ ನಡೆಯಲಿರುವÀÀದಾವಣಗೆರೆ ವಿಶ್ವವಿದ್ಯಾನಿಲಯದಅಂತರÀಕಾಲೇಜು ಮಹಿಳಾ ಕ್ರೀಡಾಕೂಟಕ್ಕೆಥ್ರೋಬಾಲ್‍ಎಸೆಯುವ ಮೂಲಕ ಚಾಲನೆ ನೀಡಿಅವರು ಮಾತನಾಡಿದರು.
ದಾವಣಗೆರೆ ಮತ್ತುಚಿತ್ರದುರ್ಗ ವಿವಿಧ ಕಾಲೇಜುಗಳಿಂದ ಬಂದಿರುವ ವಿದ್ಯಾರ್ಥಿನಿಯರು ವಿವಿಧ ಕ್ರೀಡೆಗಳಲ್ಲಿ ಉತ್ಸಾಹದಿಂದ ಸ್ಪರ್ಧಿಸಿ, ಕ್ರೀಡಾಆಯೋಜಕರುಯಾವುದೇಕುಂದುಕೊರತೆಆಗದಂತೆ ನಿಮ್ಮನ್ನು ಸೊಸೆಯಂದಿರುಅಥವಾ ಮನೆಯ ಹೆಣ್ಣುಮಕ್ಕಳಂತೆ ನೋಡಿಕೊಳ್ಳುತ್ತಾರೆ, ಕ್ರೀಡೆಯಲ್ಲಿಉತ್ತಮ ಪ್ರದರ್ಶನ ನೀಡಿಎಂದರು.
ಕಾಲೇಜುಗಳಲ್ಲಿ ಒಂದು ಪಂದ್ಯಾವಳಿಯನ್ನು ನಡೆಸುವುದೇ ಕಷ್ಟ, ಅಂತಹದರಲ್ಲಿ ನ್ಯಾಮತಿಕಾಲೇಜಿನವರು ವಿವಿಧ ಪಂದ್ಯಾವಳಿ ಆಯೋಜಿಸಿರುವುದು ಹೆಮ್ಮೆಯೆಂದುದಾವಣಗೆರೆ ವಿಶ್ವವಿದ್ಯಾನಿಲಯದಕ್ರೀಡಾಧಿಕಾರಿ ಬಿ.ಎಚ್.ವೀರಪ್ಪ ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಟಿ.ಸಿ.ಭಾರತಿ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜುಅಭಿವೃದ್ದಿ ಸಮಿತಿ ಸದಸ್ಯರು, ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಆಡಳಿತಾತ್ಮಕ ಸಿಬ್ಬಂದಿಗಳು ಕ್ರೀಡಾಕೂಟದ ನೇತೃತ್ವ ವಹಿಸಿದ್ದರು.
20 ಕಾಲೇಜುಗಳಿಂದ ಬಂದಿರುವ ಕ್ರೀಡಾಪಟುಗಳು ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಟೆನ್ನಿಕಾಯ್ಟಿ, ಹ್ಯಾಂಡ್‍ಬಾಲ್,ಬಾಲ್ ಬ್ಯಾಡ್ಮಿಂಟನ್, ಖೋ-ಖೊ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು.