ನ್ಯಾಮತಿ: ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಎರಡು ದಿನ ನಡೆದ ದಾವಣಗೆರೆ ವಿಶ್ವವಿದ್ಯಾಲಯz ಅಂತರ ಕಾಲೇಜು, ಮಹಿಳಾ ಕ್ರೀಡಾಕೂಟದಲ್ಲಿ ಅಂತಿಮ ಸ್ಪರ್ಧೆಯಲ್ಲಿ ಹೊನ್ನಾಳಿ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮದರ್ಜೆ ಕಾಲೇಜು ಮತ್ತು ದಾವಣಗೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಹಂಚಿಕೊಂಡರು.
ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಬಹುಮಾನ ವಿತರಿಸಿ ಮಾತನಾಡಿ, ಶಿಕ್ಷಣದ ಜೊತೆಯಲ್ಲಿ ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳು ಮುಖ್ಯ, ಇಂದು ಶಿಕ್ಷಣ ಅತಿ ಮುಖ್ಯವಾಗಿ ಬೇಕು. ಪ್ರತಿಯೊಬ್ಬ ಕ್ರೀಡಾಪಟು ಉತ್ತಮ ಸಾಧನೆ ಮಾಡಿ ಯಶಸ್ಸಿನಂತೆ ಸಾಗಿರಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಟಿ.ಸಿ.ಭಾರತಿ ಮಾತನಾಡಿ, ಎರಡು ದಿನ ನಡೆದ ಕ್ರೀಡಾಕೂಟ ಯಶಸ್ವಿಗೆ ಸಹಕರಿಸಿದ ಶಾಸಕರು, ಕಾಲೇಜಿನ ಸಿಡಿಸಿ ಸದಸ್ಯರು, ಸಹಾಯಕ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಪದವಿ ಕಾಲೇಜುಗಳ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಕರಿಗೆ ತೀರ್ಪುಗಾರರಿಗೆ, ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಹಾಗೂ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಹಿರೇಕಲ್ಮಠ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ ನರಗಟ್ಟೆ, ಕ್ರೀಡಾಪಟುಗಳಾದ ಪ್ರಿಯಾಂಕಾ, ಹೇಮಾವತಿ ತಮ್ಮ ಅನಿಸಿಕೆಗಳನ್ನು ಹೇಳಿದರು.
ಸಹಾಯಕ ಅಧ್ಯಾಪಕರಾದ ಎನ್.ಜ್ಯೋತಿ, ಜಿ.ಆರ್.ರಾಜಶೇಖರ, ಜಿ.ಪಿ.ರಾಘವೇಂದ್ರ, ಸೈಯದ್ ಇಮ್ರಾನ್ ತಾಸೀರ್, ಆರ್.ಸಿದ್ದಲಿಂಗಸ್ವಾಮಿ, ಎಂ.ಬಿ.ರೇವಣಸಿದ್ದಪ್ಪ,ಸಂಗಪ್ಪ ಔರಸಂಗ,ಎನ್.ದಯಾನಂದಮೂರ್ತಿ, ಕ್ರೀಡಾ ಸಂಘಟನಾ ಕಾರ್ಯದರ್ಶಿ ಎಂ.ಎಸ್.ಗಿರೀಶ ಹಾಗೂ ಅತಿಥಿ ಉಪನ್ಯಾಸಕರು, ಎಂ.ಬಿ.ಉಮೇಶ, ಎಚ್.ಕಲಾವತಿ. ಸಿಂಧುಶ್ರೀ, ಸಿಡಿಸಿ ಸದಸ್ಯರಾದ ಎಸ್.ಆರ್.ನಿತಿನ್, ರೆಡ್ಡಿ ಸುರೇಶ,ಕೆ.ಜಿ.ಯತೀಶ,ಎನ್.ಜೆ.ಸುರೇಶ ಉಪಸ್ಥಿತರಿದ್ದರು.