ನ್ಯಾಮತಿ:ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ದಾರಿಗಳಲ್ಲಿ ಭೂ ಮಾಲೀಕರಾಗಲಿ ಅಥವಾಗ್ರಾಮ ನಕಾಶೆ ಕಂಡ ದಾರಿಗಳಲ್ಲಿ ಬಳಕೆದಾರರಿಗೆ ಅಡ್ಡಿಪಡುಸುವಂತಿಲ್ಲಎಂದು ನ್ಯಾಮತಿ ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪಎಚ್ಚರಿಕೆ ನೀಡಿದರು.
ತಾಲ್ಲೂಕಿನ ಮಾಚಿಗೊಂಡನಹಳ್ಳಿ ಗ್ರಾಮದ ಸರ್ವೆ ನಂ 113ರಿಂದ119ರವರೆಗೆ ಗ್ರಾಮ ನಕಾಶೆ ಕಂಡದಾರಿಯನ್ನು ಕಳೆದ ಐದು ವರ್ಷಗಳಿಂದ ಕೆಲವು ರೈತರುತಂತಿ ಬೇಲಿ ಹಾಕಿ ಬಳಕೆದಾರ ರೈತರುತಿರುಗಾಡಲು ಅವಕಾಶವಿಲ್ಲದಂತೆ ಮಾಡಿರುವ ಬಗ್ಗೆ ಬಳಕೆದಾರ ರೈತರು ಮತ್ತು ಮಾದಿಗದಂಡೋರ ಸಮಿತಿ ಸದಸ್ಯರು ತಹಶೀಲ್ದಾರ್ ಅವರಿಗೆ ಮನವಿ ಕೊಟ್ಟ ಹಿನ್ನಲೆಯಲ್ಲಿ ಬುಧವಾರ ಸಿಬ್ಬಂದಿಯೊಡನೆ ಗ್ರಾಮಕ್ಕೆ ತೆರಳಿ ತಂತಿ ಬೇಲಿಯನ್ನು ತೆಗೆಸಿ ಸುಮಾರುಎಂಟುಅಡಿಯಷ್ಟುದಾರಿಯನ್ನು ಬಿಡಿಸಿಕೊಡುವ ಮೂಲಕ ಬಳಕೆದಾರರ ರೈತರ ಸಮಸ್ಯೆಯನ್ನು ಬಗೆಹರಿಸಿ ಅವರು ಮಾತನಾಡಿದರು.
ಇದರಿಂದಒಂಬತ್ತುಜನ ಬಳಕೆದಾರ ರೈತರಿಗೆತಮ್ಮ ಜಮೀನುಗಳಿಗೆ ಪ್ರವೇಶ ಮಾಡಲು ಅನುಕೂಲವಾಯಿತು.ಸಮಸ್ಯೆಯನ್ನು ಬಗೆಹರಿಸಿಕೊಟ್ಟ ತಹಶೀಲ್ದಾರ್ ಮತ್ತು ಸಿಬ್ಬಂದಿ, ಪೊಲೀಸ್ಇಲಾಖೆಯªರಿಗೆಕೃತಜ್ಞತೆ ಸಲ್ಲಿಸುವುದಾಗಿಕರ್ನಾಟಕ ಮಾದಿಗದಂಡೋರ ಸಮಿತಿಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಂಚಿಕೊಪ್ಪ ಎಂ.ಎಚ್.ಮಂಜಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗುತ್ತಿ ಹೋಬಳಿ ಕಂದಾಯ ನಿರೀಕ್ಷಕ ಎಂ.ಪಿ.ವೃಷಬೇಂದ್ರಸ್ವಾಮಿ, ದಂಡೋರ ಸಮಿತಿತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಿ.ಕೆ.ನರಸಿಂಹಪ್ಪ, ರೈತರಾದ ಶಿವಮೊಗ್ಗ ತೇಜಸ್, ಬಾಲೇಂದ್ರಪ್ಪ,ಷಣ್ಮುಖಪ್ಪ, ಮಲ್ಲಿಕಾರ್ಜುನ, ರಾಜು ಹಾಗೂ ಪೊಲೀಸರುಇದ್ದರು.