ಹೊನ್ನಾಳಿ: ಜು- 1 ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿಗೆ ಇಂದು ಅಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು. ಈ ಹಿಂದೆ ಅಧ್ಯಕ್ಷರ ಗಾದಿ ತೆರವಾದ ಹಿನ್ನೆಲೆಯಲ್ಲಿ ಅಧ್ಯಕ್ಷರ ಗಾದೆಗೆ ಹನುಮಂತಪ್ಪ ನೇರಲಗುಂಡಿ ಮತ್ತು ಎನ್ ಜಿ ಮಹೇಶ್, ನೇರಲಗುಂಡಿ ಬಿ ಎಚ್ ಜಯಪ್ಪ ಸಿಂಗಟಗೆರೆ ಇವರುಗಳು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದರು.
ಕೊನೆಯ ಘಳಿಗೆಯಲ್ಲಿ ಬಿ ಎಚ್ ಜಯಪ್ಪನವರು ಅರ್ಜಿ ವಾಪಸ್ ತೆಗೆದುಕೊಂಡರು. ಕಣದಲ್ಲಿ ನೇರಲಗುಂಡಿ ಒಂದೇ ಗ್ರಾಮದ ಎರಡು ಸದಸ್ಯರುಗಳು ಅಧ್ಯಕ್ಷರ ಗಾದೆಗೆ ಅರ್ಜಿ ಸಲ್ಲಿಸಿದ್ದುರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಎನ್ ಜಿ ಮಹೇಶಪ್ಪ 6 ಮತು ಪಡೆದರು. ಬಿಜೆಪಿಯ ಬೆಂಬಲಿತ ಅಭ್ಯರ್ಥಿ ಹನುಮಂತಪ್ಪ 10 ಮಾತ ಪಡೆದು ಅಧ್ಯಕ್ಷರ ಗಾದೆಗೆ ಆಯ್ಕೆಯಾದರು ಎಂದು ಸಮಾಜ ಕಲ್ಯಾಣಾಧಿಕಾರಿ ಹಾಗೂ ಚುನಾವಣಾ ಧಿಕಾರಿಗಳಾದ ಉಮಾರವರು ಘೋಷಣೆ ಮಾಡಿದರು.
ನೂತನ ಅಧ್ಯಕ್ಷರಿಗೆ ಪಂಚಾಯಿತಿಯ ಸರ್ವ ಸದಸ್ಯರುಗಳು ಅಭಿನಂದನೆ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಆರ್ ಶಾಂತಮ್ಮ, ಸದಸ್ಯರುಗಳಾದ ಮಂಜು ಜಿ, ಅಶ್ವಿನಿ ಎಸ್ಎ, ಲಲಿತಾಬಾಯಿ, ಕಿರಣ್ ಪಿ, ಚಂದ್ರಮ್ಮ ಕೆ, ಟಿ ಶೇಖರಪ್ಪ, ಟಿ,ಜಿ ರಮೇಶಗೌಡ, ಗೌರಮ್ಮ, ಅನುಪಮಾ, ಮೋಸಿ ನಾಭಿ, ಮಹಮ್ಮದ್ ಅಲಿ,ಪಿಡಿಒ ಶಿವಕುಮಾರ್, ಕಾರ್ಯದರ್ಶಿ ರಾಮನಗೌಡ, ಕೂಲಂಬಿ ಪೊಲೀಸ್ ಠಾಣಾಧಿಕಾರಿ ರಾಜು, ಪಿಸಿ ಸುನಿಲ್, ಜಗದೀಶ ಹಾಗೂ ತಿಮ್ಲಾಪುರ ಮತ್ತು ನೇರಲಗುಂಡಿ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.