ನ್ಯಾಮತಿ:ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ವಚನ ಪಿತಾಮಹಾ ಫ.ಗು.ಹಳಕಟ್ಟಿಯವರ ಜನ್ಮದಿನ ಮತ್ತು ವಚನ ಸಾಹಿತ್ಯ ಸಂಸ್ಕರಣಾ ದಿನಾಚರಣೆಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ ಸಾರ್ವಜನಿಕರೊಂದಿಗೆ ಹಳಕಟ್ಟೆಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ವಚನಗಳ ಮೌಲ್ಯವನ್ನುಜಗತ್ತಿಗೆ ತಿಳಿಸುವ ಉದ್ದೇಶದಿಂದ ಫ.ಗು.ಹಳಕಟ್ಟಿಯವರು ವಚನಗಳನ್ನು ಸಂಗ್ರಹಿಸಿ ಅವುಗಳ ಪ್ರಕಟಣೆಗೆತಮ್ಮಜೀವನವನ್ನು ಮುಡುಪಾಗಿಟ್ಟರುಎಂದು ಬೆಕ್ಕಿನ ಕಲ್ಮಠದ ಪ್ರೌಢಶಾಲೆ ಸಹಶಿಕ್ಷಕ ಕರಿಬಸವಯ್ಯ ತಿಳಿಸಿದರು.
ತಾಲ್ಲೂಕುಕಚೇರಿಯಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದನಡೆದ ವಚನ ಪಿತಾಮಹಾ ಫ.ಗು.ಹಳಕಟ್ಟಿಯವರ ಜನ್ಮದಿನ ಮತ್ತು ವಚನ ಸಾಹಿತ್ಯ ಸಂಸ್ಕರಣಾ ದಿನಾಚರಣೆಕಾರ್ಯಕ್ರಮದಲ್ಲಿಉಪನ್ಯಾಸ ನೀಡಿದರು.
ತಮ್ಮ ಸಂಶೋಧನೆ ಮೂಲಕ 250ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದದ್ದು ಸುಮಾರು 22 ಸಾವಿರ ವಚನಗಳನ್ನು ಸಂಗ್ರಹಿಸಿ ಅತ್ಯುಮೂಲ್ಯಕೊಡುಗೆ ನೀಡಿದ್ದಾರೆ.ಸಮಾಜದ ಸುಧಾರಣೆಗೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾಅಧ್ಯಕ್ಷ ಯರಗನಾಳ್ ಮಹೇಶ್ವರಪ್ಪ ಸಭೆಯಅಧ್ಯಕ್ಷತೆ ವಹಿಸಿದ್ದರು.
ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಬಸವ ಮಹಾಮನೆ ಜಂಗಮ ಷಣ್ಮುಖಪ್ಪ ಸಾಲಿ, ಕದಳಿ ಮಹಿಳಾ ಸಂಘದಅಧ್ಯಕ್ಷೆಅಂಬಿಕಮ್ಮ ಬಿದರಗಡ್ಡೆ, ಕನ್ನಡ ಶಿಕ್ಷಕ ಅರಳಪ್ಪನವರ, ಶಂಭುಲಿಂಗಎಸ್.ಜೆ., ಉಪತಹಶೀಲ್ದಾರ್ ನಂದ್ಯಪ್ಪ ಮತ್ತುಕಂದಾಯ ಇಲಾಖೆ ಸಿಬ್ಬಂದಿ, ಮುಂಡರಗಿ ಶಿವರಾಜ, ಎಂ.ಬಿ.ಶಿವಯೋಗಿ, ರೆವಿನ್ಯೂಇನ್ಸ್‍ಪೆಕ್ಟರ್ ಸುಧೀರ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.