ನ್ಯಾಮತಿ: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಲ್ಲಿ ಪಾಲ್ಗೊಳ್ಳುವ ಅವಕಾಶ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗುವುದಿಲ್ಲ. ಪಾಲ್ಗೊಂಡಿರುವ ವಿದ್ಯಾರ್ಥಿಗಳ ಶಿಬಿರದ ಅನುಭವವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಸಲಹೆ ನೀಡಿದರು.
ಸರ್ಕಾರಿ ಪ್ರಥಮದರ್ಜೆಕಾಲೇಜಿನ 2024-25ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದು, ಶಿಬಿರಕ್ಕೆ ಚಾಲನೆ ನೀಡಿಅವರು ಮಾತನಾಡಿದರು.
ಗ್ರಾಮಸ್ಥರ ಸಹಕಾರದೊಂದಿಗೆ, ಎನ್ಎಸ್ಎಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿಗ್ರಾಮದಲ್ಲಿ ಶಾಂತಿಯುತವಾಗಿ, ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಗ್ರಾಮಸ್ಥರ ಪ್ರೀತಿ ವಿಶ್ವಾಸ ಗಳಿಸಿ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಟಿ.ಸಿ.ಭಾರತಿ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮಸ್ಥರಾದ ಎ.ಎಚ್.ದೊಡ್ಡೇಶಪ್ಪ,ಕೆ.ಸಣ್ಣಬಸಪ್ಪ, ಸಿಡಿಸಿ ಸದಸ್ಯರಾದಎಚ್.ಮಲ್ಲಿಕಾರ್ಜುನ, ಬುಡ್ಡಪ್ಪ,ಎನ್.ಜೆ.ಸುರೇಶ, ಸುನೀತಾ, ಸುಮತಿ, ಎಸ್.ಆರ್.ನಿತಿನ,ಕೆ.ಜಿ.ಯತೀಶ,ಅಣ್ಣಪ್ಪ ಹಾಗೂ ಕಾಲೇಜಿನ ಬೋಧಕ ಮತ್ತು ಆಡಳಿತಾತ್ಮಕ ಸಿಬ್ಬಂದಿ, ಎಲ್ಲಾಅತಿಥಿಉಪನ್ಯಾಸಕರು, ಅತಿಥಿಉಪನ್ಯಾಸಕರಾದಅಕ್ಷತಾ ಮತ್ತುಚಂದ್ರಕಲಾ ವಿದ್ಯಾರ್ಥಿನಿಯರಜವಾಬ್ದಾರಿ ವಹಿಸಿದ್ದರು.
ಸಹಾಯಕ ಪ್ರಾಧ್ಯಾಪಕರಾದ ಸಂಗಪ್ಪಔರಸಂಗ ಸ್ವಾಗತಿಸಿದರು, ಜಿ.ಪಿ.ರಾಘವೇಂದ್ರ ವಂದಿಸಿದರು, ಗ್ರಂಥಪಾಲಕಜಿ.ಆರ್.ರಾಜಶೇಖರ ನಿರೂಪಿಸಿದರು,