ನ್ಯಾಮತಿ:ಸಮಸ್ಯೆಗಳನ್ನು ಹೊತ್ತುಕಚೇರಿಗೆ ಬರುವ ಸಾರ್ವಜನಿಕರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹಾರ ಮಾಡುವ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗಮನಹರಿಸುವಂತೆ ಶಾಸಕ ಡಿ.ಜಿ.ಶಾಂತನಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದತಾಲ್ಲೂಕಿನ ಪ.ಜಾತಿ ಮತ್ತು ಪ.ವರ್ಗಜನಾಂಗದ ಹಿತರಕ್ಷಣಾಜಾಗೃತ ಸಮಿತಿ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಸ್ಮಶಾನಜಾಗ ನೀಡುವಂತೆ ಹಾಗೂ ಹಾಲಿ ಇರುವ ಸ್ಮಶಾನಜಾಗದ ಅಳತೆ ನಿಗದಿಗೊಳಿಸಿ ಮೂಲ ಸೌಲಭ್ಯಕಲ್ಪಿಸುವಂತೆದಲಿತ ಮುಖಂಡರು ಮನವಿ ಮಾಡದ್ದು, ಸ್ಮಶಾನಕ್ಕೆ ನಿಗದಿಯಾದಜಾಗವನ್ನುಒತ್ತುವರಿ ಮಾಡುವುದು, ಅಥವಾ ಉಳುಮೆ ಮಾಡಲು ಬರುವುದಿಲ್ಲ. ಸ್ಮಶಾನಕ್ಕೆ ನಿಗದಿಯಾದಜಾಗವನ್ನು ಅಳತೆ ಮಾಡಿ ಬಂದೋಬಸ್ತ್ ಮಾಡುವುದುಆಯಾಗ್ರಾಮ ಪಂಚಾಯಿತಿಗಳ ಜವಾಬ್ದಾರಿ. ಈ ಬಗ್ಗೆ ತಾಲ್ಲೂಕು ಪಂಚಾಯಿತಿಕಾರ್ಯನಿರ್ವಾಹಕಅಧಿಕಾರಿಗಮನಹರಿಸುವಂತೆ ಸೂಚಿಸಿದರು.
ಬೆಳಗುತ್ತಿ ರಂಗನಾಥಅವರು ಪರಿಶಿಷ್ಟ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾವಿರಜನ ಕುಳಿತುಕೊಳ್ಳುವಂತ ಸು¸ಜ್ಜಿತ ್ಲ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಮನವಿ ಮಾಡಿದರು. ಸಂತ ಸೇವಾಲಾಲ್ಜನ್ಮಸ್ಥಾನ ಭಾಯಗಡ್ಗೆ ವಿವಿಧ ಭಾಗಗಳಿಂದ ಭಕ್ತರು ಬರುವುದರಿಂದಅವರ ಸೌಲಭ್ಯಕ್ಕಾಗಿ ಸವಳಂಗದಲ್ಲಿ ಬಂಜಾರ ಭವನ ನಿರ್ಮಾಣ ಮಾಡುವಂತೆ ಹಾಗೂ ಗಡೆಕಟ್ಟೆ-ಕೂಗನಹಳ್ಳಿ ಕೆರೆಗೆ ಹದ್ದುಬಸ್ತು ಇಲ್ಲ, ಕೋಡಿಒತ್ತುವರಿ ತೆರವುಗೊಳಿಸಿ,ಕಾಮಗಾರಿ ಕಳಪೆಯಿಂದ ಕೂಡಿದೆಎಂದುದೂದ್ಯಾನಾಯ್ಕದೂರಿದರು.
ಚಿನ್ನಿಕಟ್ಟೆರೆಹಮಾನ್ಅವರು, ಬೆಳಲಕಟ್ಟೆ-ಜಯನಗರದಲ್ಲಿ ಸ್ಮಶಾನಇದೆಅಭಿವೃದ್ದಿ ಆಗಬೇಕು, ಬೆಳಗುತ್ತಿ ಸ್ಮಶಾನ ಹದ್ದುಬಸ್ತು, ಯಲ್ಲಾಪುರ ಸರ್ವೆ-7ರಲ್ಲಿ 517 ಎಕರೆಅರಣ್ಯಭೂಮಿ 50,53,57ರಲ್ಲಿ ಅರ್ಜಿ ಹಾಕಿರುವವರಿಗೆ ಮಂಜೂರು ಮಾಡಬೇಕು.ಚಿನ್ನಿಕಟ್ಟೆಯಲ್ಲಿ 148ಎ 2ಎಕರೆ ಖಬರಸ್ಥಾನದಜಾಗವಿದ್ದು 1 ಎಕರೆಒತ್ತುವರಿಆಗಿರುವುದನ್ನು ಬಿಡಿಸಿಕೊಡಬೇಕು ಹಾಗೂ ನ್ಯಾಮತಿ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ ಗೃಹ ಭಾಗ್ಯಯೋಜನೆಅಡಿಯಲ್ಲಿ ಮನೆ ಕಟ್ಟಿಸಿಕೊಡುವಂತೆ ಮನವಿ ಸಲ್ಲಿಸಿದರು.
ತಾಲ್ಲೂಕು ಮಟ್ಟದ ಅಧಿಕಾರಿಗಳು ಪರಿಶಿಷ್ಟರ ಸಮಸ್ಯೆಗೆಉತ್ತಮವಾಗಿ ಸ್ಪಂದಿಸಿದರೆ ಈ ಸಮಸ್ಯೆಗಳು ಬರುತ್ತಿರಲಿಲ್ಲ ಅವರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಸೂಚಿಸಿ ಎಂದು ಮಾದಿಗದಂಡೋರ ಸಮಿತಿಯಕೆಂಚಿಕೊಪ್ಪ ಮಂಜಪ್ಪ ಹೇಳಿದರು.
ಯಾವಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆಜಾಗಇರುವುದಿಲ್ಲ ಮತ್ತು ಹದ್ದುಬಸ್ತು ಆಗಿಲ್ಲ ಅಂತಹವುಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಿಡಿಒ ಗಳಿಗೆ ಸೂಚನೆ ನೀಡುವಂತೆತಾಲ್ಲೂಕು ಪಂಚಾಯಿತಿಕಾರ್ಯನಿರ್ವಾಹಕಅಧಿಕಾರಿರಾಘವೇಂದ್ರಅವರಿಗೆ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ತಾಲ್ಲೂಕು ಪಂಚಾಯಿತಿಕಾರ್ಯನಿರ್ವಾಹಕಅಧಿಕಾರಿ ಟಿ. ರಾಘವೇಂದ್ರ, ಪೊಲೀಸ್ಇನ್ಸ್ಪೆಕ್ಟರ್ಎನ್.ಎಸ್.ರವಿ ಹಾಗೂ ತಾಲ್ಲೂಕು ಮಟ್ಟದಎಲ್ಲಾ ಇಲಾಖ ಅಧಿಕಾರಿಗಳು ಮತ್ತು ವಿವಿಧದಲಿತ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಾಜಕಲ್ಯಾಣಅಧಿಕಾರಿಎಚ್.ಎಲ್.ಉಮಾಅವರು ಸಭೆಯನ್ನು ನಿರ್ವಹಿಸಿದರು.
11ಎನ್ ಎಮ್ ಟಿ ಪೋಟೋ ಸುದ್ದಿ2
ನ್ಯಾಮತಿ: ಪ.ಜಾತಿ ಮತ್ತು ಪ.ವರ್ಗಜನಾಂಗದ ಹಿತರಕ್ಷಣಾಜಾಗೃತ ಸಮಿತಿ ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಅವರು ಅಧ್ಯಕ್ಷತೆ