ನ್ಯಾಮತಿ: ಮಲ್ಲಿಗೇನಹಳ್ಳಿ ಮತ್ತು ಬೆಳಗುತ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಕಾರ್ಯಗಾರ ಜರುಗಿತು. ಈ ಕಾರ್ಯಕ್ರಮ ವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್ವರಪ್ಪ ಜಿ ಉದ್ಘಾಟಿಸಿ ನಂತರ ಮಾತನಾಡಿದ ಅವರು ಹಿಂದಿ ಭಾಷೆಯು ರಾಷ್ಟ್ರಭಾಷೆಯಾಗಿದ್ದು, ಕನ್ನಡದ ಮಾತೃಭಾಷೆಯ ಜೊತೆಗೆ, ತೃತೀಯ ಭಾಷೆಯನ್ನ ಪ್ರತಿಯೊಬ್ಬರು ಕಲಿಯುವಂತಾಗಬೇಕು ಎಂದು ಹೇಳಿದರು. ಈ ಕಾರ್ಯಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಸರ್ಕಾರಿ ಪ್ರೌಢ ಶಾಲೆ ಶಿರಾಳಕೊಪ್ಪ ಶಾಲೆಯ ಮುಖ್ಯೋಪಾಧ್ಯಾಯ ರಂಗರಾಜ ಮಾತನಾಡಿ ಪ್ರತಿಯೊಬ್ಬರು ಬೆಳಗಿನ ಅವಧಿಯಲ್ಲಿ ಲಿಂಗ, ವಚನಕಾರಕ ಇತ್ಯಾದಿಗಳ ಮಾಹಿತಿಯೊಂದಿಗೆ ಮಧ್ಯಾಹ್ನದ ಅವಧಿಯಲ್ಲಿ ಸಂದಿ, ಸಮೂಹ, ವಿರಾಮ, ಚಿಹ್ನೆಗಳ ಬಗ್ಗೆ ಸವಿಸ್ತಾರವಾಗಿ ಮನ ಮುಟ್ಟುವಂತೆ ಶಿಕ್ಷಕರಿಗೆ ಮನವರಿಕೆ ಮಾಡಿಕೊಟ್ಟರು. ಹಿಂದಿ ಭಾಷಾ ಕ್ಲಬ್ ಅಧ್ಯಕ್ಷರಾದ ಮಹೇಂದ್ರನಾಥ್ ಕೆ ಜೆ ಪ್ರಾಸ್ತಾವಿಕ ನುಡಿಯಲ್ಲಿ ಈ ಬಾರಿ ಹಿಂದಿ ವಿಷಯದಲ್ಲಿ ಗುಣಾತ್ಮಕ ಫಲಿತಾಂಶವನ್ನು ತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಮುಖ್ಯ ಶಿಕ್ಷಕ ತೀರ್ಥಲಿಂಗಪ್ಪ ವಹಿಸಿದ್ದರು. ಕಾಶಿನಾಥ್, ವಿಶ್ವನಾಥ್ ಹಾಗೂ ಶಾಲಾ ಶಿಕ್ಷಕರು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.