ದಾವಣಗೆರೆ ಜು.15 : ವೃತ್ತಿ ರಂಗಭೂಮಿ ರಂಗಾಯಣ, ಬಾಪೂಜಿ ವಿದ್ಯಾ ಸಂಸ್ಥೆ(ರಿ), ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗಾಗಿ ಜುಲೈ 18, 19, 20 ರಂದು ನಗರದ ಜೆ.ಜೆ.ಎಂ ಮೆಡಿಕಲ್ ಕಾಲೇಜಿನ ಬಾಪೂಜಿ ಸಭಾಂಗದಲ್ಲಿ 3 ದಿನಗಳ ಕಲಾ ಮಕ್ಕಳ ನಾಟಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರುಗಳು ಮತ್ತು ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ನಾಟಕ ಪ್ರದರ್ಶನವು ಶಾಲಾ ಮಕ್ಕಳಿಗೆ ಉಚಿತವಾಗಿರುತ್ತದೆ.
ಜುಲೈ 18 ರಂದು ಬೆಳಿಗ್ಗೆ 10 ಗಂಟೆಗೆ ಮಕ್ಕಳ ರಾಮಾಯಣ, ಜುಲೈ 19 ರಂದು ಬೆಳಿಗ್ಗೆ 10 ಗಂಟೆಗೆ ಕರ್ಣ ಅರ್ಜುನರ ಕಾಳಗ, ಜುಲೈ.20 ರಂದು ಬೆಳಿಗ್ಗೆ 9 ಗಂಟೆಗೆ ಸಿರಿಧಾನ್ಯವೇ ಸರಿಧಾನ್ಯ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ವೃತ್ತಿ ರಂಗಭೂಮಿ ರಂಗಾಯಣ ವಿಶೇಷಾಧಿಕಾರಿ ತಿಳಿಸಿದ್ದಾರೆ.