ದಾವಣಗೆರೆ, ಜು.15: ದಾವಣಗೆರೆ ವಿದ್ಯಾನಗರದ ವಾಸಿಯಾದ ಕರ್ನಿಯಲ್ ಟ.ಟಿ ತಂದೆ ಮಂಗಳ್ ಟ.ಟಿ 36 ವರ್ಷ ಇವರು 2024 ರ ಫೆಬ್ರವರಿ 14 ರಂದು ಸಂಜೆ 5 ಗಂಟೆಗೆ ಹೇಳದೆ ಮನೆ ಬಿಟ್ಟು ಹೋದವರು ಇದುವರೆಗೂ ವಾಪಸ್ ಬಂದಿರುವುದಿಲ್ಲ.
ಚಹರೆ ವಿವರ: 5.2 ಅಡಿ ಎತ್ತರ, ಗೋಧಿ ಮೈ ಬಣ್ಣ, ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ಟೀ ಶರ್ಟ್, ಕಂದು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ, ಹಿಂದಿ ಭಾಷೆ ಮಾತನಾಡುತ್ತಾರೆ ಹಾಗೂ ದೋಬಿ ಕೆಲಸ ಮಾಡುತ್ತಾರೆ. ಇವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ವಿದ್ಯಾನಗರ ಪೆÇಲೀಸ್ ಠಾಣೆಗೆ ಮಾಹಿತಿ ನೀಡಲು ಪೊಲೀಸ್ ಸಬ್‍ಇನ್‍ಪೆಕ್ಟ್‍ರ್ ತಿಳಿಸಿದ್ದಾರೆ.