ನ್ಯಾಮತಿ:ತಾಲ್ಲೂಕಿನಾದ್ಯಂತ ವ್ಯಾಪಕ ಹದ ಮಳೆಯಾಗಿದೆ.ಸೋಮವಾರ ಮುಂಜಾನೆಯಿಂದ ಆರಂಭವಾಗಿರುವ ಮಳೆ ಬುಧವಾರವೂ ಸಹಾ ಮುಂದುವರೆದಿದೆ. ಇದರಿಂದ ಕೆಲವಡೆ ಮನೆಗಳಿಗೆ ಹಾನಿಯಾಗಿರುವ ಘಟನೆಯೂ ನಡೆದಿದೆ.
ಸವಳಂಗ ಮತ್ತು ಚೀಲೂರು ಭಾಗದಲ್ಲಿ ಹೆಚ್ಚಿನ ಮಳೆಯಾಗಿದೆ.ಮಳೆಯಿಂದಾಗಿ ತಾಲ್ಲೂಕಿನ ಸೇವಾಲಾಲ್ ನಗರ ಗ್ರಾಮದ ನಾಗನಾಯ್ಕ, ಕಂಚಿಗನಹಳ್ಳಿ ಗ್ರಾಮದ ಅನ್ನಪೂರ್ಣಮ್ಮ,ಸುರಹೊನ್ನೆ ಗ್ರಾಮz Àರಾಧಮ್ಮ ಮತ್ತು ಕಾವೇರಿ, ಬಿದರಹಳ್ಳಿ ಗ್ರಾಮದ ಮನೆ ದೊಡ್ಡೇರಿ ಗ್ರಾಮದ ಸಿದ್ದಮ್ಮ, ಬೆಳಗುತ್ತಿ ಹೋಬಳಿ ಮಲ್ಲಿಗೇನಹಳ್ಳಿ ದುರ್ಗಮ್ಮ, ಒಡೆಯರಹತ್ತೂರು ಗ್ರಾಮದ ಸಕ್ರೀಬಾಯಿ ಮತ್ತು ಸೋಮ್ಲೀಬಾಯಿ ಅವರುಗಳ ವಾಸದ ಮನೆಗಳು ಭಾಗಶ: ಕುಸಿದು ನಷ್ಟವಾಗಿದೆ ಎಂದು ಕಂದಾಯ ಇಲಾಖೆಯವರು ತಿಳಿಸಿದ್ದಾರೆ.