ದಾವಣಗೆರೆ; ಜು.19 : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ನಗರ ಉಪ ವಿಭಾಗ-1ರ ವತಿಯಿಂದ ಜುಲೈ 20 ರಂದು ಮಧ್ಯಾಹ್ನ 3 ರಿಂದ 5. 30 ರವರೆಗೆ ಗ್ರಾಹಕರ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರ ಉಪ ವಿಭಾಗ-1ರ ವ್ಯಾಪ್ತಿಗೆ ಬರುವ ಗ್ರಾಹಕರು ತಮ್ಮ ಅಹವಾಲುಗಳಿದ್ದಲ್ಲಿ ಮಧ್ಯಾಹ್ನ 3 ಗಂಟೆಗೆ, ನಗರ ಉಪ ವಿಭಾಗ-1, ಬೆ.ವಿ.ಕಂ. ದಾವಣಗೆರೆಯಲ್ಲಿ ಹಾಜರಾಗಬೇಕೆಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.