ನ್ಯಾಮತಿ: ತಾಲ್ಲೂಕಿ ನಾದ್ಯಂತ ಕಳೆದ ಐದು ದಿನದಿಂದ ಸುರಿಯುತ್ತಿರುವ ಮಳೆ ಮತ್ತು ಬೀಸುತ್ತಿರುವ ಗಾಳಿಯಿಂದ ಮನೆಗಳು, ಅಡಕೆ ಮರಗಳು, ವಿದ್ಯುತ್ ಕಂಬಗಳು ಬೀಳುವ ಮೂಲಕ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದೆ.
ಫಲವನಹಳ್ಳಿ ಗ್ರಾಮದ ಬೆಳ್ಳಿ-ಬೆಳಕು ಬಡಾವಣೆಯಲ್ಲಿ ಶುಕ್ರವಾರಎರಡು ವಿದ್ಯುತ್ ಕಂಬಗಳು ಬಿದ್ದಿವೆ. ಹಾಗೂ ವಾಸದ ಮನೆಯಗೋಡೆಯ ಮೇಲೆ ಮರ ಬಿದ್ದಿದೆ. ವಿದ್ಯುತ್ ಕಂಬ ಬೀಳುವ ಸಮಯದಲ್ಲಿಯೇ ನಾವು ಹೊರಗೆ ನಿಂತಿದ್ದು, ಕಂಬ ಅಲುಗಾಡಿದತಕ್ಷಣ ನಾವು ಒಳಗಡೆ ಓಡಿ ಬಂದುಜೀವ ಉಳಿಸಿಕೊಂಡೆವು ಎಂದು ಮೈನಾವತಿ,ಕಮಲಮ್ಮ, ಲಕ್ಷ್ಮಿಬಾಯಿ ಹೇಳಿದರು.
ಚಟ್ನಹಳ್ಳಿ ಗ್ರಾಮದಲ್ಲಿ ವೀರಾಪುರದ ಬಸವರಾಜಪ್ಪಅವರತೋಟದಲ್ಲಿ ಫಸಲಿಗೆ ಬಂದಿರುವಅಡಕೆ ಮರಗಳು ನೆಲಕಚ್ಚಿವೆ. ಸೋಗಿಲು ಗ್ರಾಮದಲ್ಲಿ ನೀಲಗಿರಿ ಮರ ಬಿದ್ದಿದೆ.
ಫಲವನಹಳ್ಳಿ-ಕಂಚಿಗನಹಳ್ಳಿ ರಸ್ತೆ ಮಧ್ಯೆ ಸಾಲು ಮರವೊಂದು ಬಿದ್ದು ವಿದ್ಯುತ್ ಕಂಬಗಳು ತುಂಡರಿಸಿವೆ ಬಿದ್ದಿವೆ. ತಕ್ಷಣ ವಿದ್ಯುತ್ ಸ್ಥಗಿತಗೊಳಿಸಿರುವುದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ, ಬೆಳಿಗ್ಗೆಯಿಂದ ಫಲವನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆಎಂದು ಎಚ್.ಹಳದಪ್ಪ ಮಾಹಿತಿ ನೀಡಿದರು.