ದಾವಣಗೆರೆ :ಜು.19
ಚಿತ್ರದುರ್ಗ ನಗರದಲ್ಲಿ ಜು.20ರಂದು
ಸಂಜೆ 4;30 ಗಂಟೆಗೆ ಎಚ್.ಆಂಜನೇಯ
ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾದಿಗ
ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ
ಪುರಸ್ಕಾರ ಹಾಗೂ ಟ್ರಸ್ಟ್ ಉದ್ಘಾಟನೆ
ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು
ಟ್ರಸ್ಟಿ ಬಿ.ಆರ್.ರವಿವರ್ಮ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ
ಅವರು, ಚಿತ್ರದುರ್ಗ ನಗರದ
ಚಳ್ಳಕೆರೆ ಗೇಟ್ ಸಮೀಪದ ಎಸ್.ಜಿ. ಕಲ್ಯಾಣ

ಮಂಟಪದಲ್ಲಿ ತರಳಬಾಳು ಮಠದ
ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ
ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಮ್ಮಿಕೊಂಡಿರುವ
ಪ್ರತಿಭಾ ಪುರಸ್ಕಾರ ಹಾಗೂ ಟ್ರಸ್ಟ್ ಉದ್ಘಾಟನೆ
ಕಾರ್ಯಕ್ರಮವನ್ನು ಮುಖ್ಯಮಂತ್ರಿ
ಸಿದ್ದರಾಮಯ್ಯ ನಡೆಸಿಕೊಡಲಿದ್ದಾರೆ ಎಂದು
ಮಾಹಿತಿ ನೀಡಿದ್ದಾರೆ.

ಮುಖ್ಯ ಅತಿಥಿಗಳಾಗಿ ಯೋಜನೆ ಮತ್ತು
ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ
ಸಚಿವ ಡಿ.ಸುಧಾಕರ್, ಶಾಸಕರಾದ
ಕೆ.ಸಿ.ವೀರೇಂದ್ರ ಪಪ್ಪಿ,
ಎನ್.ವೈ.ಗೋಪಾಲಕೃಷ್ಣ,
ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಮಾಜಿ
ಸಂಸದ ಬಿ.ಎನ್.ಚಂದ್ರಪ್ಪ, ವಿಧಾನ ಪರಿಷತ್
ಸದಸ್ಯ ಡಿ.ಟಿ.ಶ್ರೀನಿವಾಸ್, ಕರ್ನಾಟಕ ಆದಿ ಜಾಂಬವ
ಅಭಿವೃದ್ದಿ ನಿಗಮದ ಅಧ್ಯಕ್ಷ
ಜಿ.ಎಸ್.ಮಂಜುನಾಥ್, ಡಾ.ಬಾಬು ಜಗಜೀವನರಾಮ್
ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ
ಅಧ್ಯಕ್ಷ ಮುಂಡರಗಿ ನಾಗರಾಜ್
ಭಾಗವಹಿಸುವರು.

ಮಧ್ಯಾಹ್ನ 1.30 ರಿಂದ 2.30ರ ವರೆಗೆ
ಭೋಜನ, ಭೂಮಿ ತಾಯಿ ಬಳಗದಿಂದ
ವಾದ್ಯಗೋಷ್ಠಿ, ಮೈಸೂರು ನಗಾರಿ ಮಂಜು

ತಂಡದಿಂದ ನಗಾರಿ ಕುಣಿತ
ಹಮ್ಮಿಕೊಳ್ಳಲಾಗಿದೆ. ಸಂಜೆ 4.30ಕ್ಕೆ
ಮುಖ್ಯಮಂತ್ರಿಗಳಿಂದ ಪ್ರತಿಭಾ
ಪುರಸ್ಕಾರ ಪ್ರಧಾನ ಕಾರ್ಯಕ್ರಮ
ನಡೆಯಲಿದೆ ಎಂದು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಮಾದಿಗ
ಸಮುದಾಯದ ಚಿತ್ರದುರ್ಗ-ದಾವಣಗೆರೆ
ಜಿಲ್ಲೆಯ ಪ್ರತಿಭಾನ್ವಿತ ಶೇ. 85 ಕ್ಕಿಂತಲೂ
ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ಯಲ್ಲಿ 35,
ಪಿಯುಸಿಯ 33 ವಿದ್ಯಾರ್ಥಿಗಳಿಗೆ ಪ್ರತಿಭಾ
ಪುರಸ್ಕಾರ ನೀಡಲು ತೀರ್ಮಾನಿಸಲಾಗಿದೆ.
ಇದರಲ್ಲಿ ಅತ್ಯಂತ ಕಡುಬಡತನದ 6
ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ
ಲ್ಯಾಪ್‍ಟ್ಯಾಪ್ ನೀಡಲಾಗುತ್ತದೆ. ಉಳಿದ
ವಿದ್ಯಾರ್ಥಿಗಳಿಗೆ ಗುಣಮಟ್ಟದ ಬ್ಯಾಗ್,
ನೋಟಬುಕ್, ಪ್ರಮುಖ ಕೃತಿಗಳು ಸೇರಿ
ಕಲಿಕಾ ಸಾಮಗ್ರಿ ನೀಡಿ, ಪದಕ,
ಮ್ಯೂಮೆಂಟ್, ಶಾಲು, ಹಾರದೊಂದಿಗೆ
ವಿಶೇಷವಾಗಿ ಸನ್ಮಾನಿಸಲಾಗುತ್ತದೆ.
ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯದ
ಪ್ರತಿಭಾವಂತ ವಿದ್ಯಾರ್ಥಿಗಳನ್ನು
ಗುರುತಿಸಿ ರಾಜ್ಯಮಟ್ಟದಲ್ಲಿ ಪ್ರತಿಭಾ
ಪುರಸ್ಕಾರ ಕಾರ್ಯಕ್ರಮ

ಹಮ್ಮಿಕೊಳ್ಳಲಾಗುವುದು ಎಂದು
ಹೇಳಿದ್ದಾರೆ.

ಟ್ರಸ್ಟ್ ಸ್ಥಾಪನೆ ಮೂಲ ಉದ್ದೇಶ,
ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ನೊಂದ
ಜನರನ್ನು ಮುಖ್ಯವಾಹಿನಿಗೆ ತರಬೇಕೆಂಬ
ಮಾಜಿ ಸಚಿವ ಎಚ್.ಆಂಜನೇಯ ಅವರ
ಆಶಯವನ್ನು ಅನುಷ್ಠಾನಕ್ಕೆ
ತರುವಂತಹದ್ದಾಗಿದೆ. ಶೋಷಣೆ,
ದೌರ್ಜನ್ಯ, ಮೌಢ್ಯ ನಿರ್ಮೂಲನೆಗೆ ಶಿಕ್ಷಣವೇ
ಪ್ರಮುಖ ಅಸ್ತ್ರ ಎಂಬ ಮಾತನ್ನು ಅನೇಕ
ಸಂತರು, ದಾರ್ಶನಿಕರು, ಚಿಂತಕರು ಸದಾ
ಹೇಳಿಕೊಂಡು ಬಂದಿದ್ದಾರೆ. ಅದರಲ್ಲೂ
ಸ್ವತಃ ನೋವುಂಡವರ ಅನುಭವದ
ಮಾತು ಇದೇ ಆಗಿದೆ. ಆದ್ದರಿಂದ ನಾವೆಲ್ಲರೂ
ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ
ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಟ್ರಸ್ಟ್ ಆರಂಭದ
ಹೆಜ್ಜೆ ಇಟ್ಟಿದೆ ಎಂದು ತಿಳಿಸಿದ್ದಾರೆ.

ಸಮ ಸಮಾಜದ ಪರಿಕಲ್ಪನೆಯ ಹರಿಕಾರ
ಬಸವಣ್ಣನ ನೇತೃತ್ವದ ವಚನ ಚಳವಳಿ
ಹಾಗೂ ಜಗತ್ತಿನ ಮೇರು ವಿದ್ವಾಂಸ
ಡಾ.ಬಿ.ಆರ್.ಅಂಬೇಡ್ಕರ್ ಸೇರಿ ನೂರಾರು
ದಾರ್ಶನಿಕರ ಏಕೈಕ ಸಂದೇಶ ಶಿಕ್ಷಣ.
ಜ್ಞಾನದಿಂದ ಮಾತ್ರ ಶೋಷಣೆ ಮುಕ್ತ

ಸಮಾಜ, ಸಮಗ್ರ ಪ್ರಗತಿ ಸಾಧ್ಯ
ಎಂಬುದಾಗಿದೆ. ಆದ್ದರಿಂದ ನಾವೆಲ್ಲರೂ ಈ
ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕಿದೆ ಎಂದು
ಹೇಳಿದ್ದಾರೆ.

ದಾರ್ಶನಿಕರ ಈ ಆಶಯವನ್ನು
ಸಮರ್ಥವಾಗಿ ಅನುಷ್ಠಾನಕ್ಕೆ ತರಲು ಅಹಿಂದ
ವರ್ಗದ ಕಣ್ಮಣಿ ಸಿದ್ದರಾಮಯ್ಯ ಅವರ
2013-18 ಅವಧಿ ಸರ್ಕಾರದಲ್ಲಿ ಸಮಾಜ ಕಲ್ಯಾಣ
ಹಾಗೂ ಹಿಂದುಳಿದ ವರ್ಗದ ಖಾತೆ
ಸಚಿವರಾಗಿದ್ದ ಎಚ್.ಆಂಜನೇಯ ಶ್ರಮಿಸಿದ್ದು
ಸದಾ ಸ್ಮರಣೀಯ.

ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಗುಣಮಟ್ಟದ
ಹಾಸ್ಟೆಲ್ ಸೌಲಭ್ಯ, ಹೋಬಳಿಗೊಂದು ವಸತಿ
ಶಾಲೆ, ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ
ವಸತಿ ಶಾಲೆ ನಿರ್ಮಾಣ. ಹೀಗೆ ವಿವಿಧ ರೀತಿ
ಕಾರ್ಯಕ್ರಮದ ಮೂಲಕ ಶೈಕ್ಷಣಿಕ
ಕ್ಷೇತ್ರದಲ್ಲಿ ಕ್ರಾಂತಿಗೆ ಮುನ್ನುಡಿ ಬರೆದ
ಎಚ್.ಆಂಜನೇಯ ಅವರ ಬದ್ಧತೆ, ಕಾಳಜಿ
ಮಾದರಿ ಆಗಿದ್ದು, ಅವರ ಆಶಯಗಳನ್ನು
ಮುನ್ನಡೆಸಿಕೊಂಡು ಹೋಗಲು ಟ್ರಸ್ಟ್
ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿಯೇ ಎಸ್ಸಿಎಸ್‍ಪಿ, ಟಿಎಸ್ಪಿ ಕಾಯ್ದೆ ಜಾರಿ
ಮೂಲಕ ಗಮನ ಸೆಳೆದ
ಎಚ್.ಆಂಜನೇಯ ಅವರ ಬದುಕೇ ಸದಾ
ಸಂಘರ್ಷದ ಹಾದಿಯಲ್ಲಿ ಸಾಗಿ ಉನ್ನತ
ಸ್ಥಾನಕ್ಕೇರಿರುವುದು ನೊಂದ ಜನರ
ಪಾಲಿಗೆ ಉತ್ಸಾಹದ ಚಿಲುಮೆ ಆಗಿದೆ.

ದಾವಣಗೆರೆ ಗಾಂಧಿ ನಗರದಲ್ಲಿ ತಂದೆ
ಸ್ವಾತಂತ್ರ್ಯ ಯೋಧ, ತಾಯಿ
ಸುಸಂಸ್ಕೃತ ಕುಟುಂಬದಲ್ಲಿ ಜನಿಸಿ, ಪೌರ,
ರೈತ, ಕಾರ್ಮಿಕ, ದೇವದಾಸಿ ಸೇರಿ ಅನೇಕ
ಕ್ಷೇತ್ರದಲ್ಲಿನ ನೊಂದ ಜನರ
ಧ್ವನಿಯಾಗಿ ಹೋರಾಟದ ಮೂಲಕ,
ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತನಾಗಿ ಐದು
ವರ್ಷಗಳ ಕಾಲ ಸಚಿವರಾಗಿ ಮಾಡಿದ
ಕೆಲಸಗಳು ಅದ್ವಿತೀಯ ಆಗಿವೆ.

ಐದು ದಶಕಗಳ ಕಾಲದ ಸಾಮಾಜಿಕ,
ರಾಜಕೀಯ ಬದುಕಿನಲ್ಲಿ ಅನೇಕ
ಸಂಕಷ್ಟಗಳನ್ನು ಕಂಡಿದ್ದರೂ ಅವರ
ಸಮಾಜಮುಖಿ ಚಿಂತನೆ, ಕಾರ್ಯಗಳಿಗೆ ಸಣ್ಣ
ಧಕ್ಕೆಯೂ ಎದುರಾಗಿಲ್ಲದಿರುವುದು
ವಿಸ್ಮಯ ಮತ್ತು ಮಾದರಿ ಆಗಿದೆ.

ಸದಾ ಶಿಕ್ಷಣದ ಪ್ರಗತಿಗೆ ತುಡಿಯುವ
ಎಚ್.ಆಂಜನೇಯ ಅವರ ಮನಸ್ಸು, ಬಸವ
ತತ್ವವನ್ನು ಉಸಿರಾಗಿಸಿಕೊಂಡು, ಅಂಬೇಡ್ಕರ್
ಅವರ ಆಶಯಗಳನ್ನು ಅನುಷ್ಠಾನಕ್ಕೆ
ತರಲು ಚಿಂತಿಸುವ, ಜೊತೆಗೆ
ಕಾರ್ಯಪ್ರವೃತ್ತರಾಗುವ ಅವರ ನಡೆ,
ಸಮಾಜಮುಖಿ ಕಾರ್ಯಗಳೇ ಟ್ರಸ್ಟ್
ಚಟುವಟಿಕೆಗಳಿಗೆ ಸ್ಫೂರ್ತಿಯಾಗಿದೆ ಎಂದು
ಹೇಳಿದ್ದಾರೆ.

ಸಮಾಜ ನಮಗೆ ಎಲ್ಲವನ್ನೂ ಕೊಟ್ಟಿದೆ,
ಪ್ರತಿಯಾಗಿ ಸಮಾಜಕ್ಕೆ ಮರಳಿ ನಾವು
ಕೂಡ ಕೊಡುಗೆ ನೀಡುವ ಮೂಲಕ ಋಣ
ತೀರಿಸಬೇಕೆಂಬುದು ಎಚ್.ಆಂಜನೇಯ ಅವರ
ಆಶಯ. ಆದ್ದರಿಂದ ಅವರ ಹೆಸರಿನಲ್ಲಿ ಟ್ರಸ್ಟ್
ಅನ್ನು ಕುಟುಂಬದ ಸದಸ್ಯರೆಲ್ಲರೂ ಸೇರಿ
ಸ್ಥಾಪಿಸಿಕೊಂಡು ಸಮಾಜಮುಖಿ
ಕಾರ್ಯಗಳನ್ನು ನಿರಂತರವಾಗಿ
ಮಾಡಲಿದ್ದೇವೆ. ಅದರಲ್ಲೂ ಶಿಕ್ಷಣ
ಕ್ಷೇತ್ರಕ್ಕೆ ಪೂರಕವಾಗಿ
ಕಾರ್ಯನಿರ್ವಹಿಸಲು ತೀರ್ಮಾನಿಸಲಾಗಿದೆ ಎಂದು
ಹೇಳಿದ್ದಾರೆ

ವಿಶೇಷ ಎಂದರೆ ಟ್ರಸ್ಟ್ ಉದ್ಘಾಟನೆ ಹಾಗೂ
ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ

ಜನಪರ ಯೋಜನೆಗಳ ಹರಿಕಾರ
ಮುಖ್ಯಮಂತ್ರಿ ಸಿದ್ದರಾಮಯ್ಯ
ಆಗಮಿಸುತ್ತಿರುವುದು ವಿಶೇಷವಾಗಿದೆ.
ಅಪರೂಪ, ಸ್ಮರಣೀಯ ಈ
ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು,
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ
ಸಕಾಲಕ್ಕೆ ಆಗಮಿಸಿ ಪ್ರತಿಭಾನ್ವಿತ
ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು
ರವಿವರ್ಮ ಕೋರಿದ್ದಾರೆ.

ಪೋಟೋ ಪೈಲ್ ನೇಮ್.
19ಡಿವಿಜಿ1 ಸಿರಿಗೆರೆ ಸ್ವಾಮೀಜಿ
19ಡಿವಿಜಿ2 ಸಿದ್ದರಾಮಯ್ಯ
19ಡಿವಿಜಿ3 ಎಚ್.ಆಂಜನೇಯ

Leave a Reply

Your email address will not be published. Required fields are marked *