ನ್ಯಾಮತಿ-ಹೊನ್ನಾಳಿ ಅವಳಿ ತಾಲ್ಲೂಕಿನ ವಿವಿಧ ಕಚೇರಿಗಳಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನೌಕರರರನ್ನು ಬೇರೆಡೆ ವರ್ಗಾಯಿಸುವಂತೆಕರ್ನಾಟಕ ಭ್ರಷ್ಟಾಚಾರ ವಿರೋಧಿ ವೇದಿಕೆ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಸೊರಟೂರು ಆಗ್ರಹಿಸಿದರು.
ಶನಿವಾರ ತಹಶೀಲ್ದಾರ್ ಅವರ ಮೂಲಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಅವಳಿ ತಾಲ್ಲೂಕಿನಲ್ಲಿಕಂದಾಯ ಇಲಾಖೆ ಸೇರಿಂದತೆ ಇಲಾಖೆ ಇಲಾಖೆಗಳಲ್ಲಿ ಸುಮಾರು 7 ವರ್ಷ, ಇನ್ನು ಕೆಲವರು 26 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತ ಸಾರ್ವಜನಿಕರಿಗೆಕಂಟಕಪ್ರಾಯರಾಗಿದ್ದಾರೆ.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಸ್ಪಂದಿಸಿಲ್ಲ. ತಾವುಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಗಿದೆಎಂದರು.
ತಹಶಿಲ್ದಾರ್ ಪರವಾಗಿಶಿರಸ್ತೆದಾರ ಕೆಂಚಮ್ಮಅವರುಮನವಿ ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ವೇದಿಕೆಯಎಚ್.ಕಡದಕಟ್ಟೆ ಹನುಮಂತಪ್ಪ ಮತ್ತುಚನ್ನೇಶಇದ್ದರು.
20 ಎನ್ ಎಮ್ ಟಿ ಪೋಟೋ ಸುದ್ದಿ4
ನ್ಯಾಮತಿ-ಹೊನ್ನಾಳಿ ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ಅವಧಿ ಮೀರಿಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖಾ ನೌಕರರನ್ನು ವರ್ಗಾಯಿಸುವಂತೆ ಆಗ್ರಹಿಸಿ ಕರ್ನಾಟಕ ಭ್ರಷ್ಟಾಚಾರ ವಿರೋಧಿ ವೇದಿಕೆ ಪದಾಧಿಕಾರಿಗಳು ಶನಿವಾರ ತಹಶೀಲ್ದಾರ್ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.